ಲೋಕಸಭೆಯಲ್ಲಿ ಸೋಮವಾರ ಲಿಬರ್ಹಾನ್ ಆಯೋಗದ ವರದಿಗೆ ಸಂಬಂಧಿಸಿದಂತೆ ಚರ್ಚೆ ನಡೆದ ವೇಳೆ, ಬಾಬ್ರಿ ಮಸೀದಿ ಧ್ವಂಸ ವಿಚಾರದ ಕುರಿತು ಕಾಂಗ್ರೆಸ್, ಬಿಜೆಪಿ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕ್ಲೀನ್‌ಚಿಟ್ ನೀಡಿದೆ.
ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ಹಾಗೂ ಇತರ ನಾಯಕರು ಈ ಸಂಚು ಹೂಡಿದ್ದಾರೆ ಎಂದು ಕಾಂಗ್ರೆಸ್ ಜರೆದರೆ, ಬಿಜೆಪಿಯು ವರದಿಯನ್ನು ಘೋರ ತಪ್ಪುಗಳಿಂದ ಕೂಡಿದ ಒಂದು ರಾಜಕೀಯ ದಾಖಲೆ ಎಂದು ದೂರಿತು.
"ವಾಜಪೇಯಿ ಹೆಸರು ಫಿತೂರಿಕೋರರ ಪಟ್ಟಿಯಲ್ಲಿ ಇಲ್ಲ. ಅವರ ಹೆಸರು ಪಟ್ಟಿಗಳಲ್ಲೊಂದರಲ್ಲಿದೆ" ಎಂಬುದಾಗಿ ಸಂಸತ್ತಿನಲ್ಲಿ ದಿನಪೂರ್ತಿ ನಡೆದ ಚರ್ಚೆಯ ವೇಳೆಗೆ ಮಧ್ಯಪ್ರವೇಶಿಸಿದ ಕೇಂದ್ರ ಸಚಿವ ಸಲ್ಮಾನ್ ಖುರ್ಷೀದ್ ಹೇಳಿದ್ದಾರೆ.
ವರದಿಯ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ 17 ವರ್ಷಗಳ ಸುದೀರ್ಘಕಾಲದ ಬಳಿಕವೂ ಸತ್ಯ ಹೊರತರುವಲ್ಲಿ ವಿಫಲವಾಗಿದೆ ಎಂದು ದೂರಿದೆ.