ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅರ್ಹ ಮುಸ್ಲಿಂ ಪ್ರಧಾನಿಯಾಗಬಹುದು: ರಾಹುಲ್ ಗಾಂಧಿ (Muslim | Prime Minister | Rahul Gandhi)
Bookmark and Share Feedback Print
 
PTI
ರಾಷ್ಟ್ರದ ಅತ್ಯುನ್ನತ ಪದವಿಯಾಗಿರುವ ಪ್ರಧಾನಮಂತ್ರಿ ಹುದ್ದೆಯನ್ನು ಹೊಂದಲು ಧರ್ಮವು ಅಡ್ಡಿಯಲ್ಲ ಎಂದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಅರ್ಹ ಮುಸ್ಲಿಂ ದೇಶದ ಪ್ರಧಾನಿಯಾಗಬಹುದು ಎಂದು ಹೇಳಿದ್ದಾರೆ.

ಅಲಿಗರ್ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಂದಿಗೆ ರಾಹುಲ್ ಸಂವಾದ ನಡೆಸಿದ ವೇಳೆ ಅವರ ಈ ಹೇಳಿಕೆ ಹೊರಬಿದ್ದಿದೆ. ದೇಶವು ಮುಸ್ಲಿಂ ಪ್ರಧಾನಿಯೊಬ್ಬರನ್ನು ಹೊಂದಲು ಎಷ್ಟು ಸಮಯ ಬೇಕಾಗಬಹುದು ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸುತ್ತಾ ರಾಹುಲ್ ಮಾತನಾಡುತ್ತಿದ್ದರು.

ವಿಶ್ವವಿದ್ಯಾನಿಲಯದ ಕೆಲವೇ ವಿದ್ಯಾರ್ಥಿಗಳಿಗೆ ರಾಹುಲ್ ಭಾಷಣ ಮಾಡುವ ಸಭಾಂಗಣಕ್ಕೆ ಪ್ರವೇಶ ನೀಡಲಾಗಿತ್ತು ಮತ್ತು ಪ್ರಶ್ನೋತ್ತರಕ್ಕೆ ಅವಕಾಶ ನೀಡಲಾಗಿತ್ತು. ಸಭಾಂಗಣದ ಹೊರಗಡೆ ಬೃಹತ್ ಪರದೆಗಳನ್ನು ವ್ಯವಸ್ಥೆಗೊಳಿಸಲಾಗಿದ್ದು, ಈ ಮೂಲಕ ಈ ಕಾರ್ಯಕ್ರಮದ ವೀಕ್ಷಣೆಗೆ ಉಳಿದವರಿಗೆ ಅವಕಾಶ ನೀಡಲಾಗಿತ್ತು.

ಅರ್ಹತೆ ಇದ್ದರೆ ಮುಸ್ಲಿಂ ವ್ಯಕ್ತಿಯೊಬ್ಬರು ಪ್ರಧಾನಮಂತ್ರಿ ಹುದ್ದೆ ಅಲಂಕರಿಸಬಹುದು ಎಂದು ಅವರು ಹೇಳಿದರು. ನೀವು ಯಾವ ಧರ್ಮದವರು ಎಂಬುದು ಪ್ರಮುಖವಲ್ಲ. ನಿಮ್ಮ ಸಾಮರ್ಥ್ಯವೇನು ಮತ್ತು ನೀವು ಏನನ್ನು ಮಾಡುತ್ತೀರಿ ಎಂಬುದು ಪ್ರಮುಖವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳಿದರು.

ಪ್ರಸಕ್ತ ಮನಮೋಹನ್ ಸಿಂಗ್ ಪ್ರಧಾನಿಯಾಗಲು ಅವರ ಸಿಖ್ ಧರ್ಮ ಕಾರಣವಲ್ಲ, ಬದಲಿಗೆ ಅವರು ಆ ಹುದ್ದೆಗೆ ಅತ್ಯಂತ ಅರ್ಹ ವ್ಯಕ್ತಿ ಎಂದು ನುಡಿದರು. ರಾಜಕೀಯ ವ್ಯವಸ್ಥೆಯಲ್ಲಿ ವಿವಿಧ ಧರ್ಮಗಳ ಜನರನ್ನು ಒಟ್ಟಿಗೆ ತರುವುದು ತನ್ನ ಉದ್ದೇಶ ಎಂದು ಅವರು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ