ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಂಡಂದಿರು ಎಟಿಎಂ ಯಂತ್ರಗಳಲ್ಲ: ನೊಂದ ಪುರುಷರು (Husbands | misuse | Domestic Violence Act)
Bookmark and Share Feedback Print
 
ಮಹಿಳೆಯರು ಗೃಹಹಿಂಸಾ ಕಾಯ್ದೆಯ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದು ದೂರಿರುವ ಶೋಷಿತ ಪುರುಷರು, ಈ ಕಾಯ್ದೆಯು ಮಹಿಳಾ ಪಕ್ಷಪಾತಿತನದ್ದಾಗಿದೆ ಎಂದು ಹೇಳಿದ್ದಾರೆ. ಗೃಹಹಿಂಸೆ ವಿರುದ್ಧ ಮಹಿಳೆಯರ ರಕ್ಷಣಾ ಕಾಯ್ದೆ(ಪಿಡಬ್ಲ್ಯುಡಿವಿಎ)ಯನ್ನು ವಿರೋಧಿಸಿ ಬೀದಿಗಿಳಿದ ಗಂಡಸರು 'ಗಂಡ ಎಟಿಎಂ ಯಂತ್ರವಲ್ಲ', 'ಜೀವನಾಂಶ ಆಕೆಯ ನೈಜ ಸಾಮರ್ಥ್ಯವನ್ನು ಸಾಯಿಸುತ್ತದೆ' ಎಂಬ ಭಿತ್ತಿಚಿತ್ರ ಹಿಡಿದು ಪ್ರತಿಭಟನೆ ವ್ಯಕ್ತಪಡಿಸಿದರು.

ಇವರು ಪ್ರಸಕ್ತ ಗೃಹಹಿಂಸೆ ವಿರುದ್ಧ ಕಾಯ್ದೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ಎ, ಅಪರಾಧಿ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 125, ಮಕ್ಕಳ ಹಕ್ಕಿನ ಕುರಿತ ಕಾಯ್ದೆಗಳ ಬಲಿಪಶುಗಳು ತಾವೆಂದು ಹೇಳಿಕೊಂಡಿರುವ ಈ ಪುರುಷರು ತಮ್ಮ ಹಕ್ಕಿಗಾಗಿ ಬೀದಿಗಿಳಿದಿದ್ದಾರೆ.

"ತಮ್ಮ ಪತ್ನಿಯರಿಂದ ದೈಹಿಕ ಅಥವಾ ಮಾನಸಿಕ ಹಲ್ಲೆಗೀಡಾಗಿರುವ ಪತಿಯರು ಈ ಕುರಿತು ದೂರು ನೀಡಿದರೆ ಅವರನ್ನು ಕಾರ್ಟೂನ್‌ಗಳಂತೆ ನೋಡಲಾಗುತ್ತದೆ. ಈ ದೇಶದ ದೊಡ್ಡ ಸಂಖ್ಯೆಯ ಪುರುಷರನ್ನು ಸುಳ್ಳು ಕೇಸುಗಳಲ್ಲಿ ಕೆಡವಲಾಗಿದೆ" ಎಂಬುದಾಗಿ ಇಂಡಿಯನ್ ಫ್ಯಾಮಿಲಿ ಫೌಂಡೇಶನ್‌ನ(ಐಎಫ್ಎಫ್) ಸದಸ್ಯ ಜಿನೇಶ್ ಜವೇರಿ ಹೇಳುತ್ತಾರೆ.

"ಯೋಗ್ಯ ಪ್ರಕರಣಗಳಲ್ಲಿ ನಾವು ಮಹಿಳೆಯರ ಪರ ನಿಲ್ಲುತ್ತೇವೆ. ಆದರೆ, ಮಹಿಳೆಯರು ಜೀವನಾಂಶಕ್ಕಾಗಿ ಸುಳ್ಳುಪ್ರಕರಣಗಳನ್ನು ಹೂಡುತ್ತಾರೆ. ಜೀವನಾಂಶ ಒದಗಿಸುವ ಬದಲಿಗೆ ನಾವು ಮಹಿಳೆಯರಿಗೆ ವೃತ್ತಿಪರ ಕೋರ್ಸ್‌ಗಳನ್ನು ಪ್ರಾಯೋಜಿಸಲು ಇಚ್ಚಿಸುತ್ತೇವೆ. ಇದರಿಂದಾಗಿ ಅವರು ತಮ್ಮ ಪತಿಯಂದಿರನ್ನು ತೊರೆದ ಬಳಿಕ ಸ್ವಾವಲಂಬಿಗಳಾಗುತ್ತಾರೆ" ಎಂಬುದು ಅವರ ಅಭಿಪ್ರಾಯವಾಗಿದೆ.

ಅಂಕಿಅಂಶಗಳ ಪ್ರಕಾರ, 2007ರಲ್ಲಿ 56 ಸಾವಿರ ವಿವಾಹಿತ ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಹೋಲಿಸಿದರೆ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆಯರ ಸಂಖ್ಯೆ 30 ಸಾವಿರ. ಆತ್ಮಹತ್ಯೆ ಮಾಡಿಕೊಳ್ಳುವ ಪ್ರತಿ 100 ಮಂದಿಯಲ್ಲಿ 45 ಮಂದಿ ವಿವಾಹಿತರಾದರೆ, ಆತ್ಮಹತ್ಯೆ ಮಾಡಿಕೊಳ್ಳುವ ಪ್ರತಿ 100 ಮಹಿಳೆಯರಲ್ಲಿ 25 ಮಂದಿ ವಿವಾಹಿತರು ಎಂಬುದಾಗಿ ಜವೇರಿ ಹೇಳುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ