ಪ್ರತ್ಯೇಕ ತೆಲಂಗಾಣಕ್ಕಾಗಿ ಒತ್ತಾಯಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಹೂಡಿರುವ ಟಿಆರ್ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಅವರ ಆರೋಗ್ಯವು ಅಪಾಯಕಾರಿ ಪರಿಸ್ಥಿತಿ ತಲುಪಿದೆ ಎಂಬುದಾಗಿ ವೈದ್ಯರು ಹೇಳಿದ್ದಾರೆ.
ಅವರ ಆರೋಗ್ಯ ಸುಧಾರಣೆ ಹಾಗೂ ಇತರ ಯಾವುದೇ ಸಂಕೀರ್ಣತೆಯನ್ನು ತಪ್ಪಿಸಲು ಅವರು ತಮ್ಮ ಉಪವಾಸ ಹಿಂತೆದುಕೊಳ್ಳಬೇಕು ಎಂಬುದಾಗಿ ನಿಜಾಮ್ಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಎನ್ಐಎಂಎಸ್)ನ ವೈದ್ಯರ ತಂಡ ಸಲಹೆ ಮಾಡಿದೆ.
ಚಂದ್ರಶೇಖರ್ ಅವರ ರಕ್ತದೊತ್ತಡ ಹಾಗೂ ಸಕ್ಕರೆ ಮಟ್ಟ ಸಹಜವಾಗಿದ್ದರೂ ಪ್ರೊಟೀನ್ ಲೆವೆಲ್ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಕಾರಣ ಇದು ಇತರ ಸಮಸ್ಯೆಗಳಿಗೆ ಕಾರಣವಾಗಬಹುದು ಮತ್ತು ಇದು ಇತರ ಸೋಂಕಿಗೆ ಕಾರಣವಾಗಬಹುದು ಮತ್ತು ಅವರ ಆರೋಗ್ಯಕ್ಕೆ ಅಪಾಯ ಒಡ್ಡಬಹುದು ಎಂಬುದಾಗಿ ಆಸ್ಪತ್ರೆಯ ನಿರ್ದೇಶಕ ಡಿ. ಪ್ರಸಾದ್ ರಾವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.