ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಿರುಚಿದ ವರದಿಯನ್ನು ವಜಾಮಾಡಿ: ಸರ್ಕಾರಕ್ಕೆ ಸುಷ್ಮಾ (Babri | Liberhan | UPA | Sushma Swaraj)
Bookmark and Share Feedback Print
 
PTI
ಲಿಬರ್ಹಾನ್ ಸಮಿತಿ ವರದಿಯ ಕುರಿತು ಯುಪಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್, ವರದಿಯನ್ನು ತಿರುಚಲಾಗಿದೆ ಎಂದು ಹೇಳಿದರಲ್ಲದೆ, ಅದನ್ನು ವಜಾಗೊಳಿಸುವಂತೆ ಲೋಕಸಭೆಯಲ್ಲಿ ಮಂಗಳವಾರ ಒತ್ತಾಯಿಸಿದರು.

ವರದಿಯ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಮಸೀದಿ ಧ್ವಂಸ ಯೋಜನೆಯು ಪೂರ್ವಯೋಜಿತ ಎಂಬುದಾಗಿ ಸಾಬೀತುಪಡಿಸಲು ವಿಫಲಾಗಿದ್ದು, ವರದಿಯಲ್ಲಿ ಹೇಳಲಾಗಿರುವ ಅಂಶಗಳು ಆಧಾರರಹಿತ ಎಂದು ನುಡಿದರು.

ಪ್ರತಿಪಕ್ಷಗಳ ಗದ್ದಲ, ಸ್ವಪಕ್ಷದ ಸದಸ್ಯರ ಬೆಂಬಲದೊಂದಿಗೆ, ವರದಿಯ ಕುರಿತು ಕಟುಕುತ್ತಲೇ ಮುಂದುವರಿದ ಸುಷ್ಮಾ, ಇದು 'ಅನ್ಯಾಯದ್ದು' ಮತ್ತು 'ಅನೀತಿಯದ್ದು' ಎಂದು ವ್ಯಾಖ್ಯಾನಿಸಿದರಲ್ಲದೆ, ಈ ವರದಿಯೊಬ್ಬ ನ್ಯಾಯಾಧೀಶರದ್ದಲ್ಲ, ಬದಲಿಗೆ ಇದು ಒಬ್ಬ ರಾಜಕೀಯ ಅವಕಾಶವಾದಿಯದ್ದು ಎಂದು ಜರೆದರು.

ಸರ್ಕಾರವು ವರದಿಯನ್ನು ತಿರುಚಿದೆ ಎಂಬುದಾಗಿ ನೇರ ಆರೋಪಮಾಡಿದ ಅವರು, ಬಿಜೆಪಿಯ ಹಿರಿಯ ನಾಯಕ ವಾಜಪೇಯಿ ಅವರ ಹೆಸರನ್ನು ವರದಿಯಲ್ಲಿ ಸೇರಿಸಿರುವುದು ರಾಜಕೀಯ ವಿಕೃತಿ ಎಂದರು. ವಾಜಪೇಯಿ ಅವರನ್ನು ಒಮ್ಮೆಯೂ ಲಿಬರ್ಹಾನ್ ಸಮಿತಿ ವಿಚಾರಣೆಗೆ ಕರೆಸಿಕೊಂಡಿಲ್ಲ ಎಂದು ಬೆಟ್ಟು ಮಾಡಿದ ಅವರು, ವರದಿಯಲ್ಲಿ ಮಸೀದಿ ಧ್ವಂಸದ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹ ರಾವ್ ಅವರ ಹೆಸರೇ ಇಲ್ಲ ಎಂದು ಲೇವಡಿ ಮಾಡಿದರು.

ಈ ವರದಿಯನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ ಸುಷ್ಮಾ, ಇದೊಂದು ತಪ್ಪಾದ ಮತ್ತು ಪಕ್ಷಪಾತದ ವರದಿ ಎಂದು ಹೇಳಿದರಲ್ಲದೆ, ಇದು ಸುಧೀರ್ಘಾವಧಿಯಲ್ಲಿ ಕೋಮು ಸೌಹಾರ್ದಕ್ಕೆ ಹಾನಿಯುಂಟುಮಾಡಲಿದೆ ಎಂದು ಹೇಳಿದರು.

ಮಂದಿರ ಚಳುವಳಿಗೆ ಬೆಂಬಲ ನೀಡಿರುವುದಕ್ಕಾಗಿ ಶಿಕ್ಷೆ ನೀಡುವುದೇ ಆದಲ್ಲಿ, ತಾನು ತನ್ನ ಪಕ್ಷದ ಸದಸ್ಯರೊಂದಿಗೆ ಯಾವುದೇ ಶಿಕ್ಷೆ ಎದುರಿಸಲು ಸಿದ್ಧ ಎಂದು ಹೇಳಿದರು.

ಅದಾಗ್ಯೂ, ಸರ್ಕಾರವು ಪರಿಸ್ಥಿತಿಯನ್ನು ಮುಕ್ತಮನಸ್ಸಿನಿಂದ ನೋಡಬೇಕು ಮತ್ತು ಮಾತುಕತೆಯ ಮುಖಾಂತರ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಅವರು ಸಲಹೆ ಮಾಡಿದರು.
ಸಂಬಂಧಿತ ಮಾಹಿತಿ ಹುಡುಕಿ