ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರ್ಕರೆ ಜಾಕೆಟ್ ನಾಪತ್ತೆ ವಿರುದ್ಧ ಎಫ್ಐಆರ್ (FIR | Karkare | missing | jacket case)
Bookmark and Share Feedback Print
 
ಮುಂಬೈದಾಳಿವೇಳೆ ಕಾಮಾ ಆಸ್ಪತ್ರೆ ಬಳಿ ಉಗ್ರರ ದಾಳಿಗೆ ಆಹುತಿಯಾದ ಮಾಜಿ ಎಟಿಎಸ್ ಮುಖ್ಯಸ್ಥ ಹೇಮಂತ ಕರ್ಕರೆ ಅವರು ಧರಿಸಿದ್ದ ಗುಂಡುನಿರೋಧಕ ಜಾಕೀಟ್ ಕದ್ದಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಮುಂಬೈ ಪೊಲೀಸರು ಮಂಗಳವಾರ ಎಫ್ಐಆರ್ ದಾಖಲಿಸಿದ್ದಾರೆ.

ದಕ್ಷಿಣ ಮುಂಬೈಯ ಜೆಜೆ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸಾಮಾಜಿಕ ಕಾರ್ಯಕರ್ತರಾಗಿರುವ ಸಂತೋಷ್ ದೌವುಂಡ್‌ಕರ್ ಎಂಬವರು ಸಲ್ಲಿಸಿರುವ ದೂರಿನಾದರದಲ್ಲಿ, ಮಜ್‌ಗಾಂವ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ನೀಡಿರುವ ಆದೇಶದ ಅನುಸಾರ ಈ ದೂರು ದಾಖಲಿಸಲಾಗಿದೆ.

ಕರ್ಕರೆ ಅವರ ಕಳೆದು ಹೋಗಿರುವ ಜಾಕೀಟಿನ ಕುರಿತು ತನಿಖೆ ನಡೆಸುವಂತೆ ಮತ್ತು ಈ ಕುರಿತು ಪ್ರಥಮ ಮಾಹಿತಿ ವರದಿ ದಾಖಲಿಸುವಂತೆ ಮ್ಯಾಜಿಸ್ಟ್ರೇಟ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ.

ಕರ್ಕರೆ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ವರದಿಗಾಗಿ ಜೆಜೆ ಆಸ್ಪತ್ರೆಗೆ ಕೊಂಡೊಯ್ದ ಬಳಿಕ ಈ ಗುಂಡು ನಿರೋಧಕ ಜಾಕೀಟು ಕಾಣೆಯಾಗಿದೆ ಎಂಬುದಾಗಿ ದೂರಿನಲ್ಲಿ ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ