ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ: ಮಾತು ತಪ್ಪಿದ ಬಿಜೆಪಿ; ಪೂರ್ವಯೋಜಿತ - ಚಿದು (Ayodhya | Ram Mandir | Babri Masjid | Liberhan Commission Report | Chidambaram)
Bookmark and Share Feedback Print
 
PTI
ಅಟಲ್ ಮತ್ತು ಆಡ್ವಾಣಿ ವಿರುದ್ಧ ನಿಂದನಾತ್ಮಕ ಭಾಷೆ ಬಳಸಿದ ಕಾಂಗ್ರೆಸ್‌ನ ಬೇನಿ ಪ್ರಸಾದ್ ವರ್ಮಾ ಕ್ಷಮೆಗೆ ಒತ್ತಾಯಿಸಿ ಬಿಜೆಪಿ ಹಾಗೂ ಎನ್‌ಡಿಎ ಸದಸ್ಯರ ಗದ್ದಲದ ನಡುವೆಯೇ, ಲಿಬರ್ಹಾನ್ ಆಯೋಗದ ವರದಿ ಕುರಿತ ಚರ್ಚೆಗೆ ಲೋಕಸಭೆಯಲ್ಲಿ ಮಂಗಳವಾರ ಸರಕಾರದ ಪರವಾಗಿ ಉತ್ತರಿಸಿದ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ, ವಿವಾದಿತ ಬಾಬರಿ ಮಸೀದಿಗೆ ಸಂಬಂಧಿಸಿ ಬಿಜೆಪಿಯು ಸುಪ್ರೀಂ ಕೋರ್ಟಿಗೆ ನೀಡಿದ ಪ್ರತಿಯೊಂದು ಮಾತನ್ನೂ ಮುರಿಯಿತು ಮತ್ತು ಅಂದಿನ ಪಿ.ವಿ.ನರಸಿಂಹ ರಾವ್ ಸರಕಾರವು ಬಿಜೆಪಿಯನ್ನು ನಂಬುವ ರಾಜಕೀಯ ತಪ್ಪು ಎಸಗಿತು ಎದು ನುಡಿದರು.

ಪೂರ್ವ ಯೋಜಿತ: ಸದನದ ವೇದಿಕೆಯ ಮುಂಭಾಗದಲ್ಲಿ ಧರಣಿ ಕುಳಿತ ಪ್ರತಿಪಕ್ಷಗಳ 'ಜೈಜೈ ಅಟಲ್‌ಜೀ' ಗದ್ದಲದ ಘೋಷಣೆಗಳ ನಡುವೆಯೇ ಮಾತು ಮುಂದುವರಿಸಿದ ಚಿದಂಬರಂ, ಉತ್ತರ ಪ್ರದೇಶದ ಬಿಜೆಪಿ ಸರಕಾರವನ್ನು ನಂಬಿ ನರಸಿಂಹ ರಾವ್ ಸರಕಾರವು ದೊಡ್ಡ ತಪ್ಪೆಸಗಿತು ಮತ್ತು ಅದಕ್ಕೆ ಸೂಕ್ತ ಪ್ರತಿಫಲವನ್ನೂ ಪಡೆಯಿತು. ಈ ಕಟ್ಟಡವನ್ನು ರಕ್ಷಿಸುವುದಾಗಿ (ಅಂದಿನ ಉ.ಪ್ರ. ಮುಖ್ಯಮಂತ್ರಿ) ಕಲ್ಯಾಣ್ ಸಿಂಗ್ ಸುಪ್ರೀಂ ಕೋರ್ಟಿಗೆ ಸುಳ್ಳು ಹೇಳಿದರು ಎಂದರಲ್ಲದೆ, ಸಂಘ ಪರಿವಾರವು ಪೂರ್ವಯೋಜಿತವಾಗಿಯೇ ಈ ಬಾಬರಿ ಮಸೀದಿ ಧ್ವಂಸ ಕಾರ್ಯವನ್ನು ರೂಪಿಸಿತ್ತು ಎಂದರು. ಅಲ್ಲದೆ, ಬಾಬರಿ ಮಸೀದಿ ರಕ್ಷಣೆ ಕಾರ್ಯವು ಸಂಪೂರ್ಣವಾಗಿ ಅಂದಿನ ಕಲ್ಯಾಣ್ ಸಿಂಗ್ ಸರಕಾರದ ಹೊಣೆಯಾಗಿತ್ತು ಎಂದೂ ಹೇಳಿದರು.

ಆಡ್ವಾಣಿಗೆ ಎಲ್ಲ ಗೊತ್ತಿತ್ತು: ಆಡ್ವಾಣಿ ಹೇಳಿದಂತೆ ಇದು ಆ ಕ್ಷಣದ ಪ್ರತಿಕ್ರಿಯೆ ಆಗಿರಲಿಲ್ಲ. ಕರ ಸೇವಕರು 1992ರ ಡಿಸೆಂಬರ್ 6ರಂದು ಸಕಲ ರೀತಿಯಲ್ಲಿ ಸಜ್ಜಾಗಿಯೇ ಬಂದಿದ್ದರು. ಅಂದು ಏನು ನಡೆಯುತ್ತಿದೆ ಎಂಬ ಮಾಹಿತಿ ಎಲ್ಲವೂ ಆಡ್ವಾಣಿಗೆ ತಿಳಿದಿತ್ತು ಎಂದು ಹೇಳಿದ ಚಿದಂಬರಂ, 1992ರ ಡಿಸೆಂಬರ್ 6ರ ಅಪರಾಹ್ನ 12.15ಕ್ಕೆ ಸರಿಯಾಗಿ ಧ್ವಂಸ ಕಾರ್ಯ ಆರಂಭವಾಯಿತು. ಕರೆ ಸೇವಕರು ಗುಮ್ಮಟದ ಮೇಲಿನಿಂದ ರಂಧ್ರ ಕೊರೆದು ಹಗ್ಗ ಕಟ್ಟಿ ಒಳಗಿನಿಂದಲೇ ಗೋಪುರವನ್ನು ಬೀಳಿಸಿದರು ಎಂದು ನುಡಿದರು.

ಸುಮಾರು ಒಂದು ಗಂಟೆ ಕಾಲ ಪ್ರತಿಪಕ್ಷಗಳ ಘೋಷಣೆಯ ನಡುವೆಯೇ ಚಿದಂಬರಂ ಅವರು ಸದನದಲ್ಲಿ ಮಾತು ಮುಂದುವರಿಸಿದರು.

ಆಡ್ವಾಣಿ ಮುಸ್ಲಿಮರಿಗೆ ಹೆದರಿ ಓಡಿ ಬಂದವರು ಕ್ಲಿಕ್ ಮಾಡಿ.
ತಿರುಚಿದ ವರದಿ ವಜಾ ಮಾಡಲು ಬಿಜೆಪಿ ಆಗ್ರಹ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ