ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮದುವೆಗೂ ಮುನ್ನ ಹೆಚ್‌ಐವಿ ಪರೀಕ್ಷೆ: ಕೇಂದ್ರ ಚಿಂತನೆ (AIDS | HIVE | UPA | Congress | Parliment)
Bookmark and Share Feedback Print
 
ಮದುವೆಗೂ ಮುನ್ನ ಹೆಚ್‌ಐವಿ ಪರೀಕ್ಷೆ ಕಡ್ಡಾಯ ಮಾಡಬೇಕು ಎಂಬ ಬಗ್ಗೆ ಸಂಸತ್ತಿನಲ್ಲಿ ಹಾಗೂ ಸಂಸತ್ತಿನ ಹೊರಗೂ ಕೂಡ ಚರ್ಚೆಯಾಗಬೇಕು ಎಂದು ಸರ್ಕಾರ ರಾಜ್ಯಸಭೆಯಲ್ಲಿ ವಿವರಿಸಿದೆ.

ಏಡ್ಸ್ ವಿರುದ್ಧ ರಾಷ್ಟ್ರವ್ಯಾಪಿ ನಡೆದ ಅರಿವು ಕಾರ್ಯಕ್ರಮ ಯೋಜನೆ ಪೂರ್ಣ ಪ್ರಮಾಣದಲ್ಲಿ ಸಫಲವಾಗಿಲ್ಲ ಎಂದು ಪ್ರಶ್ನೋತ್ತರ ಸಮಯದಲ್ಲಿ ಮಾತನಾಡಿದ ರಾಜ್ಯ ಆರೋಗ್ಯ ಸಚಿವ ದಿನೇಶ್ ತ್ರಿವೇದಿ ತಿಳಿಸಿದ್ದಾರೆ.

ಹೆಚ್‌ಐವಿ ಸೋಂಕಿತ ವ್ಯಕ್ತಿಗಳ ಮಾನವ ಹಕ್ಕುಗಳನ್ನು ಸಂರಕ್ಷಿಸಲು ಮತ್ತು ರೋಗ ಬಾಧಿತ ವ್ಯಕ್ತಿಗಳು ಸಮಾಜದ ಕೆಂಗಣ್ಣಿಗೆ ಒಳಗಾಗುವುದನ್ನು ತಡೆಯುವುದಕ್ಕಾಗಿ ರೋಗಿಗಳ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದರು.

ಅದೇ ವೇಳೆ ಹೆಚ್‌ಐವಿ ಬಗ್ಗೆ ಮಸೂದೆಯೊಂದನ್ನು ಹೊರಡಿಸಲು ಸರ್ಕಾರ ಚಿಂತಿಸುತ್ತಿದ್ದು, ಈ ಪರೀಕ್ಷೆ ಕಡ್ಡಾಯಕ್ಕಾಗಿ ಇನ್ನೂ ಕಾಲಾವಕಾಶದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸಂಬಂಧಿತ ಮಾಹಿತಿ ಹುಡುಕಿ