ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಒಪ್ಪಂದ ನವೀಕರಣವಾಗ್ಲಿ ಕಪ್ಪು ಹಣದ ಮಾಹಿತಿ ಕೊಡ್ತೇವೆ: ಸ್ವಿಸ್ (Swiss | India | Black money | Manmohan singh | Sonia gandhi)
Bookmark and Share Feedback Print
 
ಸ್ವಿಸ್ ಬ್ಯಾಂಕ್‌ನಲ್ಲಿ ಕೊಳೆಯುತ್ತಿರುವ ಭಾರತೀಯರ ಕಪ್ಪು ಹಣ ವಾಪಸ್ ತರುವ ನಿಟ್ಟಿನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ, ಸ್ವಿಡ್ಜರ್‌ಲ್ಯಾಂಡ್, ಭಾರತ ಮತ್ತು ಸ್ವಿಸ್ ನಡುವಿನ ತೆರೆಗಿ ಒಪ್ಪಂದ ಪರಿಷ್ಕರಿಸುವ ಅಗತ್ಯವಿದೆ. ಹಾಗಾದಲ್ಲಿ ಮಾತ್ರ ಕಪ್ಪು ಹಣದ ಬಗ್ಗೆ ಮಾಹಿತಿ ನೀಡುವುದಾಗಿ ಸ್ವಿಸ್ ಸರ್ಕಾರ ತಿಳಿಸಿದೆ.

ಭಾರತ ಮತ್ತು ಸ್ವಿಡ್ಜರ್‌ಲ್ಯಾಂಡ್ ನಡುವಿನ ಡಬಲ್ ಟ್ಯಾಕ್ಸೇಷನ್ ಒಪ್ಪಂದವನ್ನು ನವೀಕರಿಸುವ ಕುರಿತು ಸಂವಿಧಾನದ ಮಾತುಕತೆ ನಡೆಯುತ್ತಿದ್ದು, ಒಮ್ಮೆ ನವೀಕರಣಗೊಂಡ ಡಬಲ್ ಟ್ಯಾಕ್ಸೇಷನ್ ಒಪ್ಪಂದ ನವೀಕರಿಸುವ ಬಗ್ಗೆ ಸಂಧಾನದ ಮಾತುಕತೆ ನಡೆಯುತ್ತಿದೆ. ಅದು ಜಾರಿಯಾದರೆ ಎರಡೂ ದೇಶದ ಬ್ಯಾಂಕುಗಳ ಖಾತೆಯ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯ ಎಂದು ಸ್ವಿಸ್ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಶನ್ ವಕ್ತಾರ ಬೀಟ್ ಫುರ್ರ್‌ರ್ ವಿವರಿಸಿದ್ದಾರೆ.

ಎರಡೂ ದೇಶಗಳೂ ಈಗ ಡಬಲ್ ಟ್ಯಾಕ್ಸೇಷನ್ ನಿರ್ಮೂಲನೆ ಒಪ್ಪಂದ ಹೊಂದಿದೆ. ಅದರ ನಿಯಮಗಳ ಪ್ರಕಾರ, ತಮ್ಮಲ್ಲಿನ ಯಾವುದೇ ಬ್ಯಾಂಕ್ ಖಾತೆ ವಿವರ ವಿನಿಮಯ ಮಾಡಿಕೊಳ್ಳುವಂತಿಲ್ಲ. ಆ ನಿಟ್ಟಿನಲ್ಲಿ ಇದುವರೆಗೂ ಸ್ವಿಸ್ ಬ್ಯಾಂಕ್ ಖಾತೆ ವಿವರಗಳನ್ನು ಭಾರತಕ್ಕೆ ಸರ್ಕಾರಕ್ಕೆ ನೀಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ