ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆನ್ನಿ ಪ್ರಸಾದ್ ಹೇಳಿಕೆಗೆ ಸಂಸತ್ತಿನಲ್ಲಿ ಕ್ಷಮೆಯಾಚಿಸಿದ ಪ್ರಧಾನಿ (Beni Prasad | Atal Bihari Vajpayee | Manmohan Singh)
Bookmark and Share Feedback Print
 
PTI
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಕಾಂಗ್ರೆಸ್ ಸದಸ್ಯರೊಬ್ಬರು ಲಘುವಾಗಿ ಮಾತನಾಡಿರುವುದಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ಲೋಕಸಭೆಯಲ್ಲಿ ಕ್ಷಮೆ ಯಾಚಿಸಿದರು.

"ನಿನ್ನೆ ನಾನು ಸದನದಲ್ಲಿ ಹಾಜರಿರಲಿಲ್ಲ. ಆಡಳಿತ ಮೈತ್ರಿಕೂಟದ ಸದಸ್ಯರೊಬ್ಬರು ಅನಗತ್ಯ ಹೇಳಿಕೆ ನೀಡಿರುವುದಾಗಿ ನಾನು ಕೇಳಿದ್ದು, ಇದು ಸರಿಯಲ್ಲ. ಸರ್ಕಾರದ ಪರವಾಗಿ ನಾನು ಸದನದ ಕ್ಷಮೆಯಾಚಿಸುತ್ತೇನೆ" ಎಂದು ಅವರು ಹೇಳಿದರು. ಅವರು ಮೂರು ದಿನಗಳ ರಶ್ಯಾ ಭೇಟಿಯ ಬಳಿಕ ಮಂಗಳವಾರ ರಾತ್ರಿ ಭಾರತಕ್ಕೆ ಮರಳಿದ್ದರು.

ಬೆನ್ನಿ ಪ್ರಸಾದ್ ವಾಜಪೇಯಿ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ ಬಳಿಕ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಸದನದಲ್ಲಿ ಕೋಲಾಹಲ ಎಬ್ಬಿಸಿದ್ದು, ಸದನವನ್ನು ಎರಡೆರಡು ಬಾರಿ ಮುಂದೂಡುವಂತಾಯಿತು.

ಲಿಬರ್ಹಾನ್ ಆಯೋಗದ ವರದಿಯ ಕುರಿತು ಸದನದಲ್ಲಿ ಚರ್ಚೆ ನಡೆದ ವೇಳೆ ಮಾತನಾಡಿದ ವರ್ಮಾ ಅವಮಾನಕಾರಿ ಹೇಳಿಕೆ ನೀಡಿದ್ದು ಇದನ್ನು ವಿರೋಧಿಸಿದ ಎನ್‌ಡಿಎ ಸದಸ್ಯರು ವರ್ಮಾ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಸಂಬಂಧಿತ ಮಾಹಿತಿ ಹುಡುಕಿ