ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸದ್ಯವೇ ಅಲ್ಪಸಂಖ್ಯಾತರ ಮೀಸಲಾತಿ ಮಸೂದೆ: ಪಿಎಂ (Reservation | minorities | Misra Committee | PM)
Bookmark and Share Feedback Print
 
ಅಲ್ಪಸಂಖ್ಯಾತರ ಮೀಸಲಾತಿ ಕುರಿತು ನೇಮಿಸಲಾಗಿರುವ ರಂಗನಾಥ್ ಮಿಶ್ರಾ ಸಮಿತಿ ವರದಿಯನ್ನು ಈ ಅಧಿವೇಶನದಲ್ಲಿಯೇ ಮಂಡಿಸಲಾಗುವುದು ಎಂಬುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಧವಾರ ಹೇಳಿದ್ದಾರೆ.

"ನಾವು ಈ ವರದಿಯನ್ನು ಸದನದಲ್ಲಿ ಈ ಅಧಿವೇಶನದಲ್ಲಿಯೇ ಮಂಡಿಸಲಿದ್ದೇವೆ" ಎಂಬುದಾಗಿ ಪ್ರಧಾನ ಮಂತ್ರಿಯವರು ಲೋಕಸಭೆಯಲ್ಲಿ ನುಡಿದರು.

ಈ ವರದಿಯನ್ನು ಶೀಘ್ರವೇ ಮಂಡಿಸಬೇಕು ಎಂಬುದಾಗಿ ಸಮಾಜವಾದಿ ಪಕ್ಷದ ಸದಸ್ಯರು ಮುಲಾಯಂ ಸಿಂಗ್ ನೇತೃತ್ವದಲ್ಲಿ ಒತ್ತಾಯಿಸಿದಾಗ ಪ್ರಧಾನಿಯವರ ಈ ಭರವಸೆ ಹೊರಬಿದ್ದಿದೆ.

ಈ ವಿಚಾರವನ್ನು ಮಂಗಳವಾರ ರಾಜ್ಯಸಭೆಯಲ್ಲಿ ಎತ್ತಿದ ವಿಪಕ್ಷದ ಸದಸ್ಯರು, ಈ ವರದಿಯು ಮಾಹಿತಿ ಹಕ್ಕು ಕಾಯ್ದೆಯನ್ವಯ ಮುಕ್ತವಾಗಿ ಲಭಿಸುತ್ತಿದ್ದು, ಸರ್ಕಾರವು ಇದನ್ನು ಶೀಘ್ರವೇ ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ