ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಾಗಾದ್ರೆ ಲಿಬರ್ಹಾನ್ ಗುಪ್ತಚರ ಕುರಿತು ಸುಳ್ಳು ಹೇಳಿದ್ದಾ? (Liberhan | intelligence | Centre)
Bookmark and Share Feedback Print
 
PTI
ಅಯೋಧ್ಯೆಯಲ್ಲಿ 1992ರ ಡಿಸೆಂಬರ್ 6ರಂದು ಕ್ಷುದ್ರ ಪರಿಸ್ಥಿತಿಯ ಕುರಿತು ಕೇಂದ್ರಕ್ಕೆ ವರದಿ ಮಾಡಿತ್ತು. ಈ ಕುರಿತು ದಾಖಲೆಗಳಿದ್ದರೂ, ಬಾಬ್ರಿ ಧ್ವಂಸ ಘಟನೆಯ ತನಿಖೆ ನಡೆಸಿರುವ ಲಿಬರ್ನಾನ್ ಆಯೋಗವು, ಕೇಂದ್ರಕ್ಕೆ ಕ್ರಮಕೈಗೊಳ್ಳಲು ಸೂಕ್ತ ಗುಪ್ತಚರ ಮಾಹಿತಿ ಇರಲಿಲ್ಲ ಎಂದು ಹೇಳಿದೆ. ಅಂದಿನ ಪಿ.ವಿ. ನರಸಿಂಹ ರಾವ್ ಸರ್ಕಾರಕ್ಕೆ 1992ರ ನವೆಂಬರ್ 28ರಂದು ವರದಿ ನೀಡಿದ ಗುಪ್ತಚರ ಬ್ಯೂರೋ(ಐಬಿ) "ಅಯೋಧ್ಯೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂಬ ಕುರಿತು ಉತ್ತರಪ್ರದೇಶ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಕೇಂದ್ರಕ್ಕೆ ಕಷ್ಟವಾಗಬಹುದು" ಎಂಬುದಾಗಿ ಹೇಳಿತ್ತು.

"ಪರಿಸ್ಥಿತಿ ಗಂಭೀರ ಆಯಾಮಗಳನ್ನು ಹೊಂದಿದೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಸಾಮಾನ್ಯವಾಗಿ ಮತ್ತು ಕೋಮು ಪರಿಸ್ಥಿತಿಯ ಬಗ್ಗೆ ನಿರ್ದಿಷ್ಟ ಪರಿಣಾಮ ಬೀರಬಹುದುದಾದ ಸಾಧ್ಯತೆ ಇದೆ" ಎಂಬುದಾಗಿ ಐಬಿ ಹೇಳಿದೆ. ಇದಕ್ಕೂ ಲಿಬರ್ಹಾನ್ ವರದಿಗೂ ಪರಸ್ಪರ ತಾಳೆಯಾಗುತ್ತಿಲ್ಲ.

ವರದಿಯ 923ನೆ ಪುಟದಲ್ಲಿ, "ಪರಿಸ್ಥಿಯನ್ನು ವಿಶ್ಲೇಷಿಸಲು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡುವಲ್ಲಿ ವಿಫಲವಾಗಿರುವ ಕಾರಣ ಕೇಂದ್ರ ಸರ್ಕಾರಕ್ಕೆ ತೊಡಕುಂಟಾಯಿತು" ಎಂಬುದಾಗಿ ಹೇಳಲಾಗಿದೆ. ಹಾಗಾಗಿ ಉತ್ತರ ಪ್ರದೇಶದಲ್ಲಿ ಕೇಂದ್ರ ಸರ್ಕಾರಕ್ಕೆ ಮಧ್ಯಪ್ರವೇಶಿಸಲು ಸಾಧ್ಯವಾಗಿಲ್ಲ ಎಂದೂ ವರದಿಯಲ್ಲಿ ಅಭಿಪ್ರಾಯಿಸಲಾಗಿದೆ.

"ನ್ಯಾಯಮೂರ್ತಿ ಲಿಬರ್ಹಾನ್ ಅವರು ಗುಪ್ತಚರ ವರದಿಗಳನ್ನು ಮುಚ್ಚಿಟ್ಟಿದ್ದು, ಸಂಸ್ಥೆಗೆ ಅನ್ಯಾಯವೆಸಗಿದ್ದಾರೆ. ಗುಪ್ತಚರ ಸಂಸ್ಥೆಗಳ ವೈಫಲ್ಯವೆಂಬ ಅವರ ಉಪಸಂಹಾರ ಸರಿಯಿಲ್ಲ" ಎಂಬುದಾಗಿ 1999ರಿಂದ 2007ರ ತನಕ ಆಯೋಗದ ವಕೀಲರಾಗಿದ್ದ ಅನುಪಮ್ ಗುಪ್ತಾ ಹೇಳುತ್ತಾರೆ.

ಇಡಿಯ ಕಡತವನ್ನು ಆಯೋಗದ ದಾಖಲೆಗಳಿಗೆ ಸಲ್ಲಿಸಿದ್ದರೂ, ಲಿಬರ್ಹಾನ್ ಸುಳ್ಳುಹೇಳಿದ್ದಾರೆ ಎಂಬುದಾಗಿ ವರದಿ ತೋರುತ್ತದೆ. 1992ರಲ್ಲಿ ಅದರಲ್ಲೂ ವಿಶೇಷವಾಗಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ನಿಯತವಾಗಿ ಗುಪ್ತಚರ ಸಂಸ್ಥೆಯು ಪ್ರಧಾನಮಂತ್ರಿ ಕಚೇರಿಗೆ ವರದಿ ಕಳುಹಿಸುತ್ತಿತ್ತು. ಆಗಿನ ಐಬಿ ಜಂಟಿ ನಿರ್ದೇಶಕರಾಗಿದ್ದ ಎನ್.ಸಿ. ಪಧಿ ಹಾಗೂ ಉಪನಿರ್ದೇಶಕ ವಿ.ರಾಜಗೋಪಾಲ್ ಅವರುಗಳು ನಿರಂತರವಾಗಿ ಕಳುಹಿಸಿರುವ ವರದಿಯಲ್ಲಿ ಎಚ್ಚರಿಕೆ ನೀಡುತ್ತಲೇ ಬರಲಾಗಿದೆ ಎಂದು ಅವರು ಹೇಳಿದ್ದಾರೆ.

ಆಗಿನ ಗೃಹಕಾರ್ಯದರ್ಶಿ ಮತ್ತು ಪಧಿ ಅವರುಗಳು ಜೂನ್ 28ರ 1994ರಲ್ಲಿ ಅಫಿದಾವಿತ್ ಸಲ್ಲಿಸಿದ್ದು, ಗುಪ್ತಚರ ವರದಿಯನ್ನು ರಹಸ್ಯವಾಗಿರಿಸಲು ವಿನಂತಿ ಮಾಡಿದ್ದರು. ಆಯೋಗವು ಈ ಮನವಿಯನ್ನು ಸೆಪ್ಟೆಂಬರ್ 1996ರಲ್ಲಿ ತಳ್ಳಿ ಹಾಕಿತ್ತು.
ಸಂಬಂಧಿತ ಮಾಹಿತಿ ಹುಡುಕಿ