ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 3 ಸಿಪಿಐ(ಎಂ) ಕಾರ್ಯಕರ್ತರನ್ನು ಹೊಡೆದುರುಳಿಸಿದ ನಕ್ಸಲರು (Maoists | gun down | CPI(M) | workers)
Bookmark and Share Feedback Print
 
ಶಂಕಿತ ನಕ್ಸಲರು ಗುರುವಾರ ನಸುಕಿಗೂ ಮುಂಚಿನ ಅವಧಿಯಲ್ಲಿ ಮೂವರು ಸಿಪಿಐ(ಎಂ) ಕಾರ್ಯಕರ್ತರನ್ನು ಗುಂಡಿಕ್ಕಿ ಕೊಂದಿದ್ದಾರೆ. ಮಿಡ್ನಾಪುರ ಪಶ್ಚಿಮ ಜಿಲ್ಲೆಯ ಸೆಬೆಟನ್ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.

ವಿಜಯ್ ಮಹತೋ, ಮಣಿಕ್ ಮಹತೋ ಹಾಗೂ ಬೃಹಸ್ಪತಿ ಮಹತೊ ಸಾವನ್ನಪ್ಪಿದವರಾಗಿದ್ದಾರೆ. ಈ ಮೂವರನ್ನು ಅವರ ಮನೆಯಿಂದ ಹೊರಗೆ ಕರೆದ ನಕ್ಸಲರು ಈ ದುಷ್ಕೃತ್ಯ ಎಸಗಿದ್ದಾರೆ.

ಈ ಮೂವರ ಮೃತದೇಹಗಳನ್ನು ಕಾಲೇಜೊಂದರ ಎದುರುಗಡೆ ಎಸೆದಿದ್ದು, ಪೊಲೀಸರ ಮಾಹಿತಿದಾರರಾಗಿ ವರ್ತಿಸಿರುವುದಕ್ಕೆ ಇದು ಜನರ ತೀರ್ಪಿನ ಶಿಕ್ಷೆ ಎಂಬ ಚೀಟಿಯನ್ನು ಶವಗಳ ಬಳಿ ಇರಿಸಲಾಗಿದೆ.

ಪ್ರತ್ಯೇಕ ಘಟನೆಯೊಂದರಲ್ಲಿ ಮವೋವಾದಿಗಳು ಲಾಲ್‌ಘರ್ ಪ್ರದೇಶದಲ್ಲಿ ಅರಣ್ಯ ಇಲಾಖಾ ಕಚೇರಿಯೊಂದರನ್ನು ಸ್ಫೋಟಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ