ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಲ್ಲಿ ನಿಮ್ಮ ವಾಹನ ಮೇಕೆಗೇನಾದರೂ ಗುದ್ದಿತಾ, ಜೋಕೆ! (Chicken | Bihar | Traffic jam | Saharsa)
Bookmark and Share Feedback Print
 
ನೀವು ಬಿಹಾರದ ರಸ್ತೆಗಳಲ್ಲಿ ವಾಹನ ಚಲಾಯಿಸುವ ವೇಳೆ ಯಾವುದಾದರೂ ಕೋಳಿ, ಕುರಿ, ನಾಯಿ ಏನಾದರೂ ಅಡ್ಡಬಂದರೆ ಹುಷಾರು! ಅಪ್ಪಿತಪ್ಪಿ ಏನಾದರೂ ನಿಮ್ಮ ವಾಹನ ಅದಕ್ಕೆ ತಾಗಿದರೆ ಗೋವಿಂದ, ಗೋವಿಂದ! ಪರಿಹಾರ ನೀಡಲು ನಿಮ್ಮ ಕಿಸೆ ಸಾಕಷ್ಟು ದಪ್ಪವಿರಲೇ ಬೇಕು!

ಸಹಸ್ರಾ ಎಂಬಲ್ಲಿ ಒಂದು ಗಂಟೆ ಟ್ರಾಫಿಕ್ ಜಾಮ್‌ನಲ್ಲಿ ನರಳಿ ಬಳಿಕ ವಾಹನ ಮೆಲ್ಲನೆ ತೆರಳಿದಾಗ ಅದೆಲ್ಲಿತ್ತೋ ಮೇಕೆಯೊಂದು ಈ ಅಧಿಕಾರಿಯ ವಾಹನಕ್ಕೆ ಬಡಿಯಿತು. ತಕ್ಷಣವೇ ಇವರ ವಾಹನವನ್ನು ನಿಲ್ಲಿಸಿದ ಮೇಕೆಯ ಯಜಮಾನ ಇವರ ಬಳಿ 16 ಸಾವಿರ ಪರಿಹಾರ ಬೇಡಿದ. ದೆಹಲಿಯ ಅಧಿಕಾರಿ ಉಮೇಶ್ ಗುಪ್ತಾ ಮೊದಲಿಗೆ ಇದನ್ನು ಲಘವಾಗೇ ಪರಿಗಣಿಸಿದರು. ಆದರೆ, ತಕ್ಷಣವೇ ಇವರ ವಾಹನವನ್ನು ಸುತ್ತುವರಿದ ಸ್ಥಳೀಯರು ಬೆವರಿಳಿಯುವಂತೆ ಮಾಡಿದ್ದು ಸತ್ಯ.

ಇವರು ಒಬ್ಬರೇ ತನ್ನ ಕಾರಿನಲ್ಲಿದ್ದರು. ಇವರನ್ನು ಸುತ್ತುವರಿದಿದ್ದ ಏಳೆಂಟು ಮಂದಿ ಹಣಕ್ಕಾಗಿ ಪೀಡಿಸಲಾರಂಭಿಸಿದರು. ಕೈಲಿದ್ದ ಐದು ಸಾವಿರ ನೀಡಿದರೂ ಚೌಕಾಶಿಗೆ ಬಗ್ಗದ ಮಂದಿ ಇವರ ಬಳಿ ಇದ್ದ ಚಿನ್ನದ ಸರ, ಉಂಗುರ, ವಾಚು, ಮೊಬೈಲು ಎಲ್ಲವನ್ನೂ ಕಸಿದುಕೊಂಡರು. ಅಲ್ಲಿಂದ ಸುರಕ್ಷಿತವಾಗಿ ಜಾಗ ಖಾಲಿ ಮಾಡಲು ತನಗೆ ಬೇರೆ ದಾರಿ ಇರಲಿಲ್ಲ ಎಂದು ಹೇಳುತ್ತಾರೆ ಗುಪ್ತಾ.

ಆದರೆ ಇವರಿಗೆ ಈ ಗ್ರಾಮದಲ್ಲಿ ಕೆಲವರು ಗೊತ್ತಿದ್ದ ಕಾರಣ ಈ ಹಣವನ್ನು ಅವರು ವಸೂಲಿ ಮಾಡಿಕೊಂಡರು. ಆದರೆ ರಜತ್ ಸಿಂಗ್ ಎಂಬ ವೈದ್ಯರೊಬ್ಬರೂ ಸಹ ಇಂತಹುದೇ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಆದರೆ ಅವರು ಗುಪ್ತಾರಂತೆ ಅದೃಷ್ಟವಂತರಲ್ಲ. ಕೋಳಿಯೊಂದು ಇವರ ಕಾರಿನಡಿಗೆ ಬಿದ್ದು ಸತ್ತಿರುವ ಕಾರಣಕ್ಕೆ ಬೆಂಗುಸರಾಯ್ ಎಂಬ ಗ್ರಾಮದ ಕೋಳಿಯ ಮಾಲಕನಿಗೆ ಅವರು ಏಳು ಸಾವಿರ ರೂಪಾಯಿ ಪರಿಹಾರ ನೀಡಬೇಕಾಯಿತು.

ಕಾರಣ ಸತ್ತು ಹೋದ ಕೋಳಿ ಮತ್ತಷ್ಟು ಕೋಳಿಗಳನ್ನು ಸೃಷ್ಟಿಸಬಹುದಾಗಿದ್ದು, ಆ ಕೋಳಿಗಳು ಇನ್ನಷ್ಟು ಕೋಳಿಗಳಿಗೆ ಜನ್ಮ ನೀಡುವ ಅವಕಾಶ ತಪ್ಪಿಹೋದ ಕಾರಣ ತನಗೆ ಸಾಕಷ್ಟು ನಷ್ಟವಾಗಿದೆ ಎಂಬುದು ಕೋಳಿಮಾಲಕನ ವಾದ.

ಪರಿಹಾರದ ಬೇಡಿಕೆಯು ನೀವು ಹೊಂದಿರುವ ಕಾರು, ಧರಿಸಿರುವ ಉಡುಪು ಮತ್ತು ನೀವು ಮಾತಾಡುವ ಭಾಷೆಯನ್ನು ಅವಲಂಭಿಸಿದೆ ಎಂಬುದಾಗಿ ರಜತ್ ಹೇಳುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ