ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿವಾಹದ ಗಂಟೆಗಳೊಳಗೆ ವರದಕ್ಷಿಣೆ ಭೂತಕ್ಕೆ ಬಲಿಯಾದ ವಧು (Bride | kills | marriage | Nadia)
Bookmark and Share Feedback Print
 
ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ನವವಿವಾಹಿತೆಯೊಬ್ಬಾಕೆ ವರದಕ್ಷಿಣೆ ಒತ್ತಾಯದಿಂದ ಬೇಸತ್ತು ವಿವಾಹವಾದ ಒಂದೇ ದಿನದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕುಟಿ ಎಂಬ ಗ್ರಾಮದಲ್ಲಿ ಜುತಿಕಾ ದಾಸ್(22) ಎಂಬ ಈ ಯುವತಿಯ ತಂದೆಯ ಮನೆಇದ್ದು, ಈ ಮನೆಯ ಮಾಡಿಗೆ ನೇಣುಹಾಕಿಕೊಂಡಿರುವ ಆಕೆ ನಸುಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದಾಗಿ ಅವರು ಹೇಳಿದ್ದಾರೆ.

ತನ್ನ ಪುತ್ರಿಯ ಪತಿಯ ಮನೆಯವರು ವಿವಾಹಕ್ಕೆ ಕೆಲವೇ ಕ್ಷಣಗಳ ಮುಂಚೆ 11 ಗಂಟೆ ವೇಳೆಗೆ ದೊಡ್ಡ ಮೊತ್ತದ ವರದಕ್ಷಿಣೆ ಬೇಡಿಕೆ ಇಟ್ಟಿದ್ದು, ಬೇಡಿಕೆ ಇಟ್ಟಿರುವ ಮೊತ್ತವನ್ನು ನೀಡಲಾಗದೇ ಇದ್ದುದಕ್ಕೆ ತನ್ನನ್ನು ಸಾರ್ವಜನಿಕವಾಗಿ ನಿಂದಿಸಿದರು ಎಂಬುದಾಗಿ ಜುತಿಕಾಳ ತಂದೆ ಪ್ರಿಯಲಾಲ್ ದಾಸ್ ದೂರಿನಲ್ಲಿ ಹೇಳಿದ್ದಾರೆ.

ಪರವಾನಿಗೆ ರಹಿತವಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿರುವ ವರ ಬಿಪುಲ್ ತಾಲೂಕ್ದಾರ್ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ