ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರತ್ಯೇಕ ತೆಲಂಗಾಣ ಸ್ಥಾಪನೆಗೆ 2 ವರ್ಷ ಬೇಕು: ರೋಸಯ್ಯ (K. Rosayya | Andhra Pradesh | Telangana | Central govt)
Bookmark and Share Feedback Print
 
ತೆಲಂಗಾಣ ಪ್ರತ್ಯೇಕ ರಾಜ್ಯ ವಿವಾದಕ್ಕೆ ಸಂಬಂಧಿಸಿದಂತೆ ಆತುರದ ಕ್ರಮದಿಂದ ರಾಜಿನಾಮೆ ನೀಡದಂತೆ ಶಾಸಕರಲ್ಲಿ ಮನವಿ ಮಾಡಿಕೊಂಡಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ. ರೋಸಯ್ಯ, ಪ್ರತ್ಯೇಕ ರಾಜ್ಯ ಪ್ರಕ್ರಿಯೆಗೆ ಕನಿಷ್ಠ ಎರಡು ವರ್ಷಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

ಅತ್ತ ಭಾರೀ ಪ್ರತಿಭಟನೆ, ಹಿಂಸಾಚಾರಗಳು ನಡೆಯುತ್ತಿರುವಂತೆಯೇ ಹೈದರಾಬಾದ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೋಸಯ್ಯ, ಪ್ರತ್ಯೇಕ ರಾಜ್ಯ ರಚನೆ ಕುರಿತಂತೆ ವಿಪಕ್ಷ ನಾಯಕರ ಜತೆ ಚರ್ಚೆ ನಡೆಸಲಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಹಿಂಸೆಯನ್ನು ಪ್ರಚೋದಿಸದೆ ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.

ರಾಜಕಾರಣಿಗಳು ಯಾವುದೇ ರೀತಿಯ ಗೊಂದಲವನ್ನು ಜನತೆಯಲ್ಲಿ ಮೂಡಿಸಬಾರದು. ಸಂಯಮವನ್ನು ಕಾಪಾಡಿಕೊಂಡು ತಮ್ಮ ಘನತೆಯನ್ನು ಮೆರೆಯಬೇಕು ಎಂದು ಕರೆ ನೀಡಿರುವ ರೋಸಯ್ಯ, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಹಿಂಸಾಚಾರದಲ್ಲಿ ತೊಡಗಿಸಿಕೊಳ್ಳದಂತೆ ಕೇಳಿಕೊಂಡಿದ್ದಾರೆ.

ರಾಯಲಸೀಮೆ, ಕರಾವಳಿ ಪ್ರದೇಶಗಳ ಜಿಲ್ಲೆಗಳ ಮುಖಂಡರ ಜತೆ ವಿಸ್ತೃತ ಸಮಾಲೋಚನೆ ನಡೆಸಲಾಗುತ್ತದೆ. ಈಗಾಗಲೇ ಕೇಂದ್ರದ ನಾಯಕರು ಈ ಸಂಬಂಧ ಮಾತುಕತೆ ಆರಂಭಿಸಿದ್ದು, ಯಾವುದೇ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಶಾಸಕರು ಸಂಯಮದಿಂದಿರಬೇಕು ಮತ್ತು ರಾಜಿನಾಮೆಗಳನ್ನು ನೀಡಬಾರದು ಎಂದರು.

ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕೇಂದ್ರ ನಾಯಕರಿಗೆ ವಿವರಣೆ ನೀಡಲಾಗುತ್ತಿದೆ. ನಾವು ಕೇಂದ್ರದ ನಿಲುವನ್ನು ಕಾದು ನೋಡುತ್ತಿದ್ದೇವೆ. ಪ್ರತ್ಯೇಕ ರಾಜ್ಯ ರಚನೆ ಕಾರ್ಯಗತಗೊಳಿಸಲು ಕನಿಷ್ಠ ಎರಡು ವರ್ಷಗಳ ಕಾಲಾವಕಾಶ ಅಗತ್ಯವಿದೆ. ಅದರ ರೂಪುರೇಷೆಗಳು, ಚಿತ್ರಣ ಇನ್ನಷ್ಟು ನಡೆಯಬೇಕಿದೆ ಎಂದು ಆಕ್ರೋಶಿತರನ್ನು ಸಮಾಧಾನಪಡಿಸಲು ರೋಸಯ್ಯ ಯತ್ನಿಸಿದರು.

ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಆಗ್ರಹಿಸಿ ತೆಲಂಗಾಣ ರಾಷ್ಟ್ರೀಯ ಹೋರಾಟ ಸಮಿತಿಯ ಕೆ. ಚಂದ್ರಶೇಖರ ರಾವ್ ನಡೆಸಿದ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮಣಿದ ಕೇಂದ್ರ ಒಪ್ಪಿಗೆ ಸೂಚಿಸಿದ್ದನ್ನು ವಿರೋಧಿಸಿ ಇಂದು ತೆಲಂಗಾಣ ಹೊರತುಪಡಿಸಿದ ಪ್ರಾಂತ್ಯದಲ್ಲಿ ಭಾರೀ ಪ್ರತಿಭಟನೆ, ಹಿಂಸಾಚಾರಗಳು ನಡೆಯುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ