ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚೀನೀಯರ ಪೂರ್ವಜರು ಭಾರತದಿಂದ ವಲಸೆ ಹೋದವರೇ? (Ancestor | China | India | Mitali Mukerji)
Bookmark and Share Feedback Print
 
ಹಾಗೊಂದು ಅನುವಂಶಿಕ ಸಂಶೋಧನೆ ಬಹಿರಂಗಪಡಿಸಿದೆ. ಅದರ ಪ್ರಕಾರ ಚೀನೀಯರು, ದಕ್ಷಿಣ ಏಷಿಯನ್ನರು ಸೇರಿದಂತೆ ಏಷಿಯಾದ ಬಹುತೇಕ ಮಂದಿಯ ಪೂರ್ವಜರು ಭಾರತದಿಂದ ಹೋದವರು.

ಆಫ್ರಿಕಾದಿಂದ ಲಕ್ಷ ವರ್ಷಗಳ ಹಿಂದೆ ಮೊತ್ತ ಮೊದಲು ಮನುಷ್ಯ ಬಂದಿದ್ದು ಭಾರತೀಯ ಉಪಖಂಡಕ್ಕೆ, ನಂತರವಷ್ಟೇ ಅವರು ಏಷಿಯಾದ ಇತರ ಭಾಗಗಳಿಗೆ ವಲಸೆ ಹೋದರು ಎಂದು 10 ರಾಷ್ಟ್ರಗಳಲ್ಲಿ ನಡೆಸಿರುವ ಈ ಅಧ್ಯಯನ ವಿವರಣೆ ನೀಡಿದೆ.

ದಕ್ಷಿಣ ಆಫ್ರಿಕಾದಿಂದ ಮಾನವರು ವಲಸೆ ಹೊರಟದ್ದು ಮೊದಲಿಗೆ ಭಾರತಕ್ಕೆ. ನಂತರ ಭಾರತದಿಂದ ದಕ್ಷಿಣ ಏಷಿಯಾ ಮತ್ತು ಪೂರ್ವ ಏಷಿಯಾಗಳಿಗೆ, ಕೊನೆಗೆ ಅಮೆರಿಕಾಕ್ಕೆ ಮನುಷ್ಯರು ವಲಸೆ ಹೋಗಿದ್ದರು. ಹಾಗಾಗಿ ಏಷಿಯಾದ ಪ್ರತಿಯೊಬ್ಬರೂ ಭಾರತದೊಂದಿಗೆ ಅನುವಂಶಿಕ ಸಂಬಂಧ ಹೊಂದಿದ್ದಾರೆ ಎಂದು ಅನುವಂಶೀಯ ಮತ್ತು ಏಕೀಕೃತ ಜೀವಶಾಸ್ತ್ರ ವಿಭಾಗದ ವಿಜ್ಞಾನಿ ಮಿತಾಲಿ ಮುಖರ್ಜಿ ಹೇಳಿದ್ದಾರೆ.

ಏಷಿಯಾದಲ್ಲಿನ ಮಾನವನ ಅನುವಂಶೀಯತೆ ಪತ್ತೆ ಅಧ್ಯಯನವನ್ನು ಭಾರತ ಸೇರಿದಂತೆ ಏಷಿಯಾದ 10 ರಾಷ್ಟ್ರಗಳಲ್ಲಿ ನಡೆಸಲಾಗಿತ್ತು. ವೈಜ್ಞಾನಿಕ ಮತ್ತು ಕೈಗಾರಿಕಾ ಅಧ್ಯಯನ ಸಮಿತಿಯ ಮಹಾನಿರ್ದೇಶಕ ಸಮೀರ್ ಬ್ರಹ್ಮಾಚಾರಿ ಹೊರತುಪಡಿಸಿ ಐಜಿಐಬಿ ಸಂಸ್ಥೆಯ ಕೆಲವು ವಿದ್ಯಾರ್ಥಿಗಳು ಮತ್ತು ಎಂಟು ಸದಸ್ಯರ ಭಾರತೀಯ ಅಧ್ಯಯನ ತಂಡ ಇದರಲ್ಲಿ ಪಾಲ್ಗೊಂಡಿತ್ತು.

ಆಫ್ರಿಕಾದಿಂದ ಪೂರ್ವ ಏಷಿಯಾಕ್ಕೆ ಮಾನವನು ನೇರವಾಗಿ ಬಂದಿದ್ದ ಎಂಬ ಈ ಹಿಂದಿನ ಅಧ್ಯಯನವನ್ನು ಪ್ರಸಕ್ತ ಸಂಶೋಧನೆ ಅಲ್ಲಗಳೆದಿದ್ದು, ಹೊಸ ವಿವರಣೆಯನ್ನೇ ನೀಡಿದೆ.

ದಕ್ಷಿಣ ಭಾರತದ ದ್ರಾವಿಡರು ಮತ್ತು ಮಲೇಷಿಯಾ, ಸಿಂಗಾಪುರಗಳಲ್ಲಿನ ನಿರ್ದಿಷ್ಟ ಜನರ ನಡುವೆ ಇರುವ ಸಾಮ್ಯತೆಗಳನ್ನು ಪತ್ತೆ ಹಚ್ಚಲಾಗಿದೆ. ಅದಕ್ಕಿಂತಲೂ ಆಸಕ್ತಿದಾಯಕ ವಿಚಾರವೆಂದರೆ ಉತ್ತರ ಭಾರತೀಯರು ಮತ್ತು ದ್ರಾವಿಡರ ನಡುವೆ ಅನುವಂಶೀಯ ಸಂಬಂಧವಿರುವುದು. ಎರಡೂ ಜನಾಂಗಗಳ ನಡುವಿನ ಅನುವಂಶೀಯತೆಯಲ್ಲಿ ಸಾಮ್ಯತೆಗಳಿರುವುದನ್ನು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ ಎಂದು ವಿಜ್ಞಾನಿಗಳು ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ