ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಲ್ಲಾ ಕಡೆ ನೂತನ ರಾಜ್ಯ ಅಸಾಧ್ಯ: ಕೇಂದ್ರ ಸ್ಪಷ್ಟನೆ (Telangana | Andhra Pradesh | Pranab Mukherjee | Seperate State issue)
Bookmark and Share Feedback Print
 
ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡುವ ತೀರ್ಮಾನಕ್ಕೆ ಬಂದಿರುವುದನ್ನು ದೇಶದಾದ್ಯಂತ ರಾಜ್ಯಗಳನ್ನು ವಿಭಜಿಸಲಾಗುತ್ತದೆ ಎಂದು ಅರ್ಥ ಕಲ್ಪಿಸಬೇಡಿ ಎಂದು ಹೇಳುವ ಮೂಲಕ ವಿದರ್ಭ, ಗೂರ್ಖಾಲ್ಯಾಂಡ್, ಬೋಡೋಲ್ಯಾಂಡ್, ಹರಿತ್ ಪ್ರದೇಶ್, ಬಂದೇಲ್ಖಂಡ್, ಪೂರ್ವಾಂಚಲ ಸೇರಿದಂತೆ ಸಾಲು ಸಾಲಾಗಿ ಬರುತ್ತಿರುವ ಬೇಡಿಕೆಗಳಿಗೆ ಕೇಂದ್ರ ಸರಕಾರ ತಣ್ಣೀರೆರಚಿದೆ.

ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣವೆಂಬ ಪ್ರತ್ಯೇಕ ರಾಜ್ಯವನ್ನು ರಚಿಸುವ ಸಂಬಂಧ ಕೇಂದ್ರ ಸರಕಾರವು ಒತ್ತಡಕ್ಕೆ ಮಣಿದ ಬಳಿಕ ಇತರ ನೂತನ ರಾಜ್ಯಾಸಕ್ತರು ಕೂಡ ಅದೇ ಹಾದಿ ಹಿಡಿದಿರುವುದನ್ನು ಗಮನಿಸಿ ಸ್ಪಷ್ಟನೆ ನೀಡಲಾಗಿದೆ.

ಪಶ್ಚಿಮ ಬಂಗಾಲದ ಬರಾಸತ್‌ನಲ್ಲಿ ಮಾತನಾಡುತ್ತಾ ಸರಕಾರದ ನಿಲುವನ್ನು ತಿಳಿಸಿದ ವಿತ್ತ ಸಚಿವ ಪ್ರಣಬ್ ಮುಖರ್ಜಿ, ತೆಲಂಗಾಣವನ್ನು ಪರಿಗಣಿಸಿದಂತೆ ಇತರೆಡೆಗಳಿಂದ ಬರುತ್ತಿರುವ ಬೇಡಿಕೆಗಳನ್ನೂ ಈಡೇರಿಸಲಾಗುವುದಿಲ್ಲ ಎಂದರು.

ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯ ನೀಡಬೇಕೆನ್ನುವುದು ಇಂದು ನಿನ್ನೆಯ ಬೇಡಿಕೆಯಲ್ಲ, ಇದಕ್ಕೆ 60 ವರ್ಷವಾಗಿದೆ. ಹಾಗೆಂದು ಇತರೆಲ್ಲ ಕಡೆಗಳಲ್ಲೂ ನೂತನ ರಾಜ್ಯಗಳನ್ನು ರಚಿಸಲಾಗುತ್ತದೆ ಎಂದು ಅರ್ಥವಲ್ಲ ಎಂದರು.

ಉತ್ತರ ಪ್ರದೇಶ, ಬಿಹಾರಗಳನ್ನು ಕೂಡ ವಿಭಜಿಸಿ ಪುಟ್ಟ ರಾಜ್ಯಗಳನ್ನಾಗಿ ಮಾಡಬೇಕು ಎಂದು ಮಾಯಾವತಿ ಮತ್ತು ಲಾಲೂ ಪ್ರಸಾದ್ ಯಾದವ್ ಹೇಳಿದ ನಂತರ ಸಣ್ಣ ರಾಜ್ಯಗಳ ಕೂಗಿಗೆ ಹೆಚ್ಚಿನ ತೂಕ ಬಂದಿತ್ತು. ಇದೇ ರೀತಿ ಮುಂದುವರಿದರೆ ಹೆಚ್ಚಿನ ಒತ್ತಡ ಬರಬಹುದು ಎಂಬುದನ್ನು ಮನಗಂಡ ಕೇಂದ್ರ ತನ್ನ ನಿಲುವು ತೆಲಂಗಾಣಕ್ಕೆ ಮಾತ್ರ ಸೀಮಿತ. ಅದು ಆದ್ಯತೆಗೆ ಸಂಬಂಧಿಸಿದ್ದು ಎಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ