ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೈ ಅಲರ್ಟ್: ಚೆನ್ನೈಗೆ ಚಂಡಮಾರುತ ಅಪ್ಪಳಿಸುವ ಭೀತಿ (Taminadu | Chennai | Bangalore | Cyclone)
Bookmark and Share Feedback Print
 
ಭೀಕರ ಚಂಡಮಾರುತ ಅಪ್ಪಳಿಸಿದೆ ಎಂಬ ಮುನ್ಸೂಚನೆ ಮೇರೆ ಚೆನ್ನೈನ ಕರಾವಳಿ ಭಾಗದಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈನಿಂದ 250ಕಿ.ಮೀ.ದೂರದಲ್ಲಿರುವ ನಾಗಪಟ್ಟಣಂನ ಉತ್ತರ ಭಾಗದ ಕರಾವಳಿಯಲ್ಲಿ ಕೇಂದ್ರೀಕೃತವಾಗಿರುವ ಚಂಡಮಾರುತ ಮಧ್ಯರಾತ್ರಿ ಸಂದರ್ಭ ಚೆನ್ನೈಗೆ ಬಂದಪ್ಪಳಿಸುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ವಿವರಿಸಿದೆ.

ಭಾನುವಾರ ರಾತ್ರಿ ಸುಮಾರು 8ಗಂಟೆ ಹೊತ್ತಿಗೆ ಪಾಂಡಿಚೇರಿ ಕರಾವಳಿ ಪ್ರದೇಶದಲ್ಲಿ ಬಂದಪ್ಪಳಿಸಲಿದೆ. ಅದೇ ರೀತಿ ಮುಂದುವರಿದು ಚೆನ್ನೈಗೆ ಸುಮಾರು 50-60ಕಿ.ಮೀ.ವೇಗದಲ್ಲಿ ಅಪ್ಪಳಿಸಲಿದೆ.

ಅಲ್ಲದೇ ಮುಂದಿನ 24ರಿಂದ 48ಗಂಟೆಗಳ ಕಾಲ 28ಸೆ.ಮೀ. ಮಳೆಯಾಗುವ ಸಾಧ್ಯತೆ ಇದ್ದು, ಚಂಡಮಾರುತದ ಪರಿಣಾಮದಿಂದಾಗಿ ನೆರೆಯ ಕರ್ನಾಟಕ, ಆಂಧ್ರಪ್ರದೇಶಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ವೆಬ್ ಸೈಟ್ ವರದಿ ಹೇಳಿದೆ.

ಭಾರೀ ಪ್ರಮಾಣದಲ್ಲಿ ಚಂಡಮಾರುತ ಬಂದಪ್ಪಳಿಸಿದೆ ಎಂಬ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ತಮಿಳುನಾಡು, ನಾಗಪಟ್ಟಣಂ, ಪಾಂಡಿಚೇರಿ ಕರಾವಳಿ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ