ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಖ್ ಗಲಭೆ: ಟೈಟ್ಲರ್, ಸಜ್ಜನ್ ವಿರುದ್ಧ ಕ್ರಮಕ್ಕೆ ಅನುಮತಿ (CBI | 1984 riot | Sikh riot | Jagdish Tytler)
Bookmark and Share Feedback Print
 
1984ರ ಸಿಖ್ ವಿರೋಧಿ ಗಲಭೆಯ ಆರೋಪಿಗಳಾದ ಜಗದೀಶ್ ಟೈಟ್ಲರ್ ಮತ್ತು ಸಜ್ಜರ್ ಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿಬಿಐ ಕೋರಿದ್ದ ಅನುಮತಿಗೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದೆ.

ಕಾನೂನು ಕ್ರಮಕ್ಕಾಗಿ ಸಿಬಿಐಗೆ ಅನುಮತಿ ನೀಡಲಾಗಿದೆ ಎಂದು ಗೃಹಸಚಿವ ಪಿ. ಚಿದಂಬರಂ ಸೋಮವಾರ ತಿಳಿಸಿದ್ದಾರೆ.

ಟೈಟ್ಲರ್, ಕುಮಾರ್ ಮತ್ತು ದಿವಂಗತ ಧರಂ ದಾಸ್ ಶಾಸ್ತ್ರಿಯವರ ವಿರುದ್ಧದ ಏಳು ಪ್ರಕರಣಗಳ ತನಿಖೆ ಅಥವಾ ಮರು ತನಿಖೆಯನ್ನು ಸಿಬಿಐ ಪೂರ್ಣಗೊಳಿಸಿದೆ ಎಂದು ಚಿದಂಬರಂ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ನಾಲ್ಕು ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರಕ್ಕಾಗಿ ಸೆಕ್ಷನ್ ಸಿಆರ್‌ಪಿಸಿ 196ರ ಅಡಿಯಲ್ಲಿ ಸಿಬಿಐ ಮನವಿ ಸಲ್ಲಿಸಿತ್ತು. ಮತ್ತೊಂದು ಪ್ರಕರಣವು ಅಂತಿಮ ಹಂತಕ್ಕೆ ಬಂದಿದ್ದು, ಅದನ್ನು ನ್ಯಾಯಾಲಯ ಸ್ವೀಕರಿಸಿದೆ ಎಂದರು.

ಸಿಖ್ ವಿರೋಧಿ ಗಲಭೆಯ ಆರೋಪಿಗಳ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಪ್ರಕರಣ ಯಾವ ಹಂತದಲ್ಲಿದೆ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಗೃಹ ಸಚಿವ ತಿಳಿಸಿದರು.

ಇಂದಿರಾ ಗಾಂಧಿಯವರನ್ನು ಇಬ್ಬರು ಸಿಖ್ ಭದ್ರತಾ ಸಿಬ್ಬಂದಿಗಳು ಹತ್ಯೆಗೈದ ಬಳಿಕ ಸಿಖ್ ವಿರೋಧಿ ಗಲಭೆ ನಡೆದಿತ್ತು. ಇದರಲ್ಲಿ ಕಾಂಗ್ರೆಸ್ ಮುಖಂಡರಾದ ಟೈಟ್ಲರ್ ಮತ್ತು ಸಜ್ಜನ್ ಒಳಗೊಂಡಿದ್ದಾರೆ ಎಂದು ಆರೋಪಿಸಲಾಗಿದ್ದು, ಘಟನೆಯಲ್ಲಿ 3,000ಕ್ಕೂ ಹೆಚ್ಚು ಸಿಖ್ಖರು ಕೊಲ್ಲಲ್ಪಟ್ಟಿದ್ದರು.
ಸಂಬಂಧಿತ ಮಾಹಿತಿ ಹುಡುಕಿ