ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಶೋಪಿಯಾನ್' ಸಿಬಿಐ ವರದಿ ಪರಮಸತ್ಯವಲ್ಲ: ಹೈಕೋರ್ಟ್ (Shopian rape | CBI | Kashmir Valley | Nilofar Jan)
Bookmark and Share Feedback Print
 
ಶೋಪಿಯಾನ್ ಪ್ರಕರಣದಲ್ಲಿ ಯುವತಿಯರಿಬ್ಬರನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿಲ್ಲ, ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಸಿಬಿಐ ಸಲ್ಲಿಸಿರುವ ಅಂತಿಮ ವರದಿಯನ್ನು ತಳ್ಳಿ ಹಾಕಿರುವ ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯ, ಸಿಬಿಐ ವರದಿಯೇ ಪರಮಸತ್ಯವಲ್ಲ ಎಂದಿದೆ.

ಕಾಶ್ಮೀರ ಕಣಿವೆಯಲ್ಲಿ ಇದೇ ವರ್ಷ ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿನ ಇಬ್ಬರು ಮಹಿಳೆಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವರದಿಯನ್ನು ಸಿಬಿಐ ಇಂದು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದನ್ನು ಅಪರಾಹ್ನ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ, ಶೋಫಿಯಾನ್ ಕುರಿತು ಸಿಬಿಐ ನೀಡಿರುವ ವರದಿಯೇ ಅಂತಿಮವಲ್ಲ ಎಂದು ತಿಳಿಸಿದೆ.

ನಿಲೋಫರ್ ಜಾನ್ (22) ಮತ್ತು ಆಕೆಯ ಸಂಬಂಧಿ 17ರ ಹರೆಯದ ಆಸಿಯಾ ಜಾನ್‌ರ ಶವ ಮೇ 30ರಂದು ಸೋಪಿಯಾನ್‌ನಲ್ಲಿನ ಕಾಲುವೆಯಲ್ಲಿ ಪತ್ತೆಯಾಗಿದ್ದವು. ಇವರಿಬ್ಬರನ್ನೂ ಭದ್ರತಾ ಪಡೆಗಳ ಸಿಬ್ಬಂದಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿದ್ದರು ಎಂದು ಆರೋಪಿಸಿ ಭಾರೀ ಪ್ರತಿಭಟನೆಗಳು ನಡೆದಿದ್ದವು.

47 ದಿನಗಳ ಕಾಲ ನಡೆದ ಬಂದ್‌, ಹಿಂಸಾಚಾರಗಳಿಂದ ತತ್ತರಿಸಿದ ರಾಜ್ಯ ಸರಕಾರ ಏಕಸದಸ್ಯ ಆಯೋಗವೊಂದನ್ನು ತನಿಖೆಗಾಗಿ ನೇಮಿಸಿತ್ತು. ಯುವತಿಯರನ್ನು ಅತ್ಯಾಚಾರವೆಸಗಿರುವುದು ವರದಿಯಲ್ಲಿ ಖಚಿತವಾದ ಹಿನ್ನಲೆಯಲ್ಲಿ ಸಾಕ್ಷ್ಯಗಳನ್ನು ನಾಶಪಡಿಸಿದ ಆರೋಪದ ಮೇಲೆ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ, ಬಂಧಿಸಲಾಯಿತು. ಬಳಿಕ ಪ್ರಕರಣವನ್ನು ಸೆಪ್ಟೆಂಬರ್ ತಿಂಗಳಲ್ಲಿ ಸಿಬಿಐಗೆ ವಹಿಸಲಾಗಿತ್ತು.

ತನಿಖಾ ವರದಿಯನ್ನು ಮಾಧ್ಯಮಗಳಿಗೆ ನೀಡಬಾರದೆಂದು ಸಿಬಿಐಗೆ ನ್ಯಾಯಾಲಯವು ಸೂಚಿಸಿತ್ತು. ಆದರೆ ಶ್ರೀನಗರದಲ್ಲಿನ ಕೆಲವು ಪತ್ರಿಕೆಗಳು, ತಮಗೆ ವರದಿಗಳು ಲಭ್ಯವಾಗಿವೆ ಎಂದು ತಿಳಿಸಿವೆ.

ಪತ್ರಿಕೆಗಳ ಪ್ರಕಾರ ಇಬ್ಬರು ಯುವತಿಯರನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿಲ್ಲ ಮತ್ತು ಅವರು ಸತ್ತಿರುವುದು ನೀರಿನಲ್ಲಿ ಮುಳುಗಿ ಎಂದು ಸಿಬಿಐ ತನ್ನ ವರದಿಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ