ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೆಡ್ಲಿ ಪ್ರಕರಣದಿಂದ ಎಚ್ಚೆತ್ತ ಭಾರತ; ವೀಸಾ ನೀತಿ ಪರಿಷ್ಕರಣೆ (David Coleman Headley | India | tourist visa regulations | Visa)
Bookmark and Share Feedback Print
 
ಪಾಕಿಸ್ತಾನ ಸಂಜಾತ ಅಮೆರಿಕಾ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಭಾರತ, ವಿದೇಶಿಯರ ಸುದೀರ್ಘಾವಧಿ ಪ್ರವಾಸಿ ವೀಸಾಗಳ ನಿಯಮಗಳನ್ನು ಪರಿಷ್ಕರಿಸಿದೆ.

ವಿದೇಶಿ ಪ್ರಜೆಗಳು ಭಾರತ ಪ್ರವೇಶಕ್ಕೆ ಸುದೀರ್ಘಾವಧಿ ವೀಸಾ ಮತ್ತು ಇತರ ಪ್ರವೇಶ ನೀತಿಗಳನ್ನು ಪರಿಷ್ಕರಿಸಿದ್ದು, ಈಗಾಗಲೇ ನೂತನ ನೀತಿಗಳನ್ನು ಅಳವಡಿಸಿದೆ. ಅದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅಮೆರಿಕಾ ತನ್ನ ಪ್ರಜೆಗಳಿಗೆ ನೀಡಿರುವ ಸಲಹೆಯಲ್ಲಿ ತಿಳಿಸಿದೆ.

ಕೊನೆಯ ಭಾರತ ಪ್ರವಾಸ 90 ದಿನಗಳಿಗಿಂತ ಹೆಚ್ಚಿದ್ದರೆ ಅಥವಾ ಅವರು ಈ ಹಿಂದಿನ ವರ್ಷ 180 ದಿನಗಳ ಕಾಲ ಭಾರತದಲ್ಲಿ ತಂಗಿದ್ದರೆ, ಭಾರತದಿಂದ ಕೊನೆಯ ಪ್ರವಾಸವನ್ನು ಎರಡು ತಿಂಗಳುಗಳೊಳಗೆ ಮುಗಿಸಿಕೊಂಡು ಬಂದಿದ್ದರೆ ಅವರು ಹೊಂದಿರುವ ಐದು ಅಥವಾ 10 ವರ್ಷಗಳ ಪ್ರವಾಸಿ ವೀಸಾಗಳಿಗೆ ಭಾರತ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ರಾಯಭಾರ ಕಚೇರಿ ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿದೆ.

ಹೆಡ್ಲಿ ಮತ್ತು ಪಾಕಿಸ್ತಾನಿ ಸಂಜಾತ ಕೆನಡಿಯನ್ ತಹಾವುರ್ ರಾಣಾ ಹುಸೈನ್ ಎಂಬ ಶಂಕಿತ ಉಗ್ರರನ್ನು ಎಫ್‌ಬಿಐ ಬಂಧಿಸಿದ ಬಳಿಕ ಭಾರತ ತನ್ನ ವೀಸಾ ನೀತಿಗಳಲ್ಲಿ ಬದಲಾವಣೆ ತಂದಿದೆ. ಇವರಿಬ್ಬರಿಗೂ ಮಲ್ಟಿ-ಎಂಟ್ರಿ ವೀಸಾಗಳನ್ನು ಸಮರ್ಪಕ ಸುರಕ್ಷತಾ ಪರಿಶೀಲನೆಗಳಿಲ್ಲದೆ ನೀಡಲಾಗಿತ್ತು. ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಮುಂಬೈ ದಾಳಿಯಲ್ಲಿ ಹೆಡ್ಲಿ ಮತ್ತು ರಾಣಾ ಪ್ರಮುಖ ಪಾತ್ರವಹಿಸಿದ್ದರು ಎಂದು ಹೇಳಲಾಗಿದೆ.

ಅದೇ ಹೊತ್ತಿಗೆ ಅಲ್ಪಾವಧಿಯ ಪ್ರವಾಸಿ ವೀಸಾಗಳು ಅಥವಾ ಬೇರೆ ರೀತಿಯ ವೀಸಾಗಳನ್ನು ಹೊಂದಿದ ಅಥವಾ ಹೊಂದುವ, ಭಾರತದಲ್ಲಿ ಅತ್ಯಲ್ಪ ಕಾಲ ತಂಗುವ ಅಮೆರಿಕನ್ ಪ್ರಜೆಗಳಿಗೆ ಈ ಯಾವುದೇ ಬದಲಾವಣೆಗಳು ಅನ್ವಯಿಸುವುದಿಲ್ಲ.

ಎರಡು ತಿಂಗಳುಗಳಿಗೂ ಮೊದಲು ಭಾರತದಿಂದ ವಾಪಸ್ ಬರುವ ಪ್ರವಾಸಿಗರು ವಿಶೇಷ ಅನುಮತಿಗಾಗಿ ಭಾರತೀಯ ರಾಯಭಾರ ಕಚೇರಿಗೆ ಮನವಿ ಸಲ್ಲಿಸಬೇಕು ಎಂದು ಅಮೆರಿಕಾ ರಾಯಭಾರ ಕಚೇರಿ ತಿಳಿಸಿದೆ.

ಅದೇ ಹೊತ್ತಿಗೆ ಪ್ರವಾಸ ಯಾವ ಉದ್ದೇಶಕ್ಕಾಗಿ ಎಂದು ಸ್ಪಷ್ಟಪಡಿಸಬೇಕು. ಉದ್ಯಮ, ಉದ್ಯೋಗ, ಅಧ್ಯಯನ ಅಥವಾ ಸಂಶೋಧನೆಗಳಿಗೆ ಈ ವೀಸಾಗಳಡಿಯಲ್ಲಿ ಪ್ರವಾಸಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ