ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬ್ರಿ ಮಸೀದಿ ಧ್ವಂಸ; ಲಿಬರ್ಹಾನ್ ಖರ್ಚು 9 ಕೋಟಿ..! (Ram Janma Bhoomi | Babri Masjid | Ayodhya | Liberhan Commission)
Bookmark and Share Feedback Print
 
ಇಸವಿಖರ್ಚು (ಲಕ್ಷಗಳಲ್ಲಿ)
1992-938.98
1993-9425.19
1994-9530.50
1995-9636.61
1996-9738.43
1997-9845.86
1998-9952.72
1999-200051.65
2000-0149.54
2004-0560.19
2005-0654.93
2006-0750.44
2007-0849.39
2009-1062.00
ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮಭೂಮಿ ಎಂದು ಹೇಳಲಾದ ಸ್ಥಳದಲ್ಲಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತನಿಖೆಗೆಂದು ನೇಮಿಸಲಾದ ಲಿಬರ್ಹಾನ್ ಆಯೋಗ ತನ್ನ 17 ವರ್ಷಗಳ ಸುದೀರ್ಘಾವಧಿಯ ತನಿಖಾ ವರದಿಗೆ ಖರ್ಚು ಮಾಡಿದ ಹಣ ಬರೋಬ್ಬರಿ ಒಂಬತ್ತು ಕೋಟಿ ರೂಪಾಯಿಗಳಂತೆ.

ಅಯೋಧ್ಯಾ ತನಿಖೆಗಾಗಿ ಲಿಬರ್ಹಾನ್ ಆಯೋಗಕ್ಕಾಗಿ 900.02 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ರಾಜ್ಯಸಭೆಯಲ್ಲಿ ಗೃಹ ಸಚಿವಾಲಯದ ರಾಜ್ಯ ಸಚಿವ ಅಜಯ್ ಮೇಕನ್ ತಿಳಿಸಿದ್ದಾರೆ.
Babri Masjid
PTI


17 ವರ್ಷಗಳಷ್ಟು ಸುದೀರ್ಘ ಕಾಲ ನಡೆದ ತನಿಖೆಗಾಗಿ 9.02 ಕೋಟಿ ರೂಪಾಯಿ ವೆಚ್ಚವಾಗಿದೆ. 2008-09ರ ಅವಧಿಯಲ್ಲಿ ತನಿಖೆಗಾಗಿ ಗರಿಷ್ಠ ಅಂದರೆ 89.77 ಲಕ್ಷ ರೂಪಾಯಿ ಹಾಗೂ 2001-02ರಲ್ಲಿ 68.58 ಲಕ್ಷ ಮತ್ತು 2002-03 ಅವಧಿಯಲ್ಲಿ 62.63 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.

ಸಾರ್ವಜನಿಕ ಹಿತಾಸಕ್ತಿಯನ್ನು ಆಧರಿಸಿ ಅಯೋಧ್ಯೆಯ ರಾಜ ಜನ್ಮಭೂಮಿಯಲ್ಲಿನ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತನಿಖೆಗಾಗಿ ಲಿಬರ್ಹಾನ್ ಆಯೋಗವನ್ನು ನೇಮಕ ಮಾಡಲಾಗಿತ್ತು ಎಂದು ಸಚಿವ ಮೇಕನ್ ತಿಳಿಸಿದ್ದಾರೆ.

1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿಯನ್ನು ಕರಸೇವಕರು ಧ್ವಂಸ ಮಾಡಿದ್ದರು. ಈ ಸಂಬಂಧ ತನಿಖೆಗಾಗಿ ಅದೇ ತಿಂಗಳಿನ 16ನೇ ತಾರೀಕಿನಂದು ಆಯೋಗವನ್ನು ರಚಿಸಲಾಗಿತ್ತು. 49 ಬಾರಿ ತನಿಖೆಯ ಅವಧಿಯನ್ನು ವಿಸ್ತರಿಸಲಾಗಿದ್ದು, 2009ರ ಜುಲೈ 31ಕ್ಕೆ ಆಯೋಗ ತನಿಖೆಯನ್ನು ಪೂರ್ಣಗೊಳಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ