ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್ ಚಾರ್ಜ್‌ಶೀಟ್‌ಗೆ ಕೇಂದ್ರದ ಒತ್ತಡ ಇರಲಿಲ್ಲ: ನಿಕಮ್ (Mumbai Terror Attack Trial | Ajmal Kasab | Ujwal Nikam | Terrorist Attack on India)
26-11 ದಾಳಿಗೆ ಸಂಬಂಧಿಸಿದಂತೆ ಬಂಧಿತನಾಗಿರುವ ಏಕೈಕ ಪಾಕಿಸ್ತಾನಿ ಉಗ್ರಗಾಮಿ ಅಜ್ಮಲ್ ಕಸಬ್ ಮತ್ತು ಇತರ ಇಬ್ಬರು ಆರೋಪಿಗಳ ವಿರುದ್ಧ 12 ಪ್ರತ್ಯೇಕ ಆರೋಪಪಟ್ಟಿಗಳನ್ನು ಸಲ್ಲಿಸಲು ಕೇಂದ್ರದ ಮಂತ್ರಿಯೊಬ್ಬರಿಂದ ಒತ್ತಡ ಬಂದಿತ್ತು ಎಂಬ ಅಂಶವು ಕುತೂಹಲಕ್ಕೆ ಕಾರಣವಾಗಿದೆ.
ಆದರೆ, ಈ ಆರೋಪಗಳನ್ನು ಕಸಬ್ ವಕೀಲ ಉಜ್ವಲ್ ನಿಕಮ್ ತಳ್ಳಿ ಹಾಕಿದ್ದಾರೆ. ಇಂತಹ ಯಾವುದೇ ಒತ್ತಡಗಳೂ ಬಂದಿಲ್ಲ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ನಿಕಮ್ ಸ್ಪಷ್ಟನೆ ನೀಡಿದ್ದಾರೆ.
ಲಾತೂರಿನಲ್ಲಿ ಶನಿವಾರ 'ಭಯೋತ್ಪಾದನೆ ಮತ್ತು ಮಾನವ ಹಕ್ಕುಗಳು' ವಿಷಯಕ್ಕೆ ಸಂಬಂಧಿಸಿ ನಿಕಮ್ ಮತ್ತು ಇತರ ಭಾಷಣಕಾರರು ಸೆಮಿನಾರ್ ಒಂದರಲ್ಲಿ, ವಿಚಾರಣೆಗಳನ್ನು ತ್ವರಿತವಾಗಿ ಮುಗಿಸುವ ಬಗ್ಗೆ ಒತ್ತಿ ಹೇಳಿದರು.
ಕಸಬ್ ಮತ್ತು ಇತರರ ವಿರುದ್ಧ ಹನ್ನೆರಡು ಪ್ರಕರಣಗಳಲ್ಲಿ ಪ್ರತ್ಯೇಕ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸುವಂತೆ, ಇದರಿಂದ ಪ್ರತಿಯೊಂದು ಕೇಸುಗಳ ತೀರ್ಪು ಬೇಗನೆ ಲಭಿಸಬಹುದು ಎಂದು ಸರಕಾರವು ಸಲಹೆ ನೀಡಿರುವುದಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನಿಕಮ್ ಹೇಳಿದ್ದರು.
1993ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸುದೀರ್ಘ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ತೀರ್ಪು ಹೊರಬೀಳಲು 14 ವರ್ಷಗಳೇ ಬೇಕಾಗಿದ್ದ "ಕೆಟ್ಟ ಅನುಭವ"ದ ಹಿನ್ನೆಲೆಯಲ್ಲಿ ಈ ಸಲಹೆ ನೀಡಲಾಗಿತ್ತು ಎಂದು ಅವರು ಹೇಳಿದರು.
ಆದರೆ, ಎಲ್ಲ ಆರೋಪಗಳನ್ನು ಒಟ್ಟುಗೂಡಿಸಿ ಒಂದೇ ಚಾರ್ಜ್‌ಶೀಟ್ ಸಲ್ಲಿಸುವ ಬಗ್ಗೆ ಅಧಿಕಾರಿಗಳಿಗೆ ತಿಳಿಹೇಳುವಲ್ಲಿ ನಾನು ಯಶಸ್ವಿಯಾಗಿದ್ದೇನೆ. ನನ್ನ ಸಲಹೆಯನ್ನು ಸ್ವೀಕರಿಸಿದ್ದಾರೆ ಮತ್ತು ಇಲ್ಲಿ ಯಾವುದೇ ಒತ್ತಡ ಇರಲಿಲ್ಲ ಎಂದು ನಿಕಮ್ ಹೇಳಿದರು.