ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2 ಸಾವಿರ ಗುಂಡುನಿರೋಧಕ ಜಾಕೆಟ್ ಖರೀದಿ:ಪಾಟೀಲ್ (police | Karkare | bullet-proof jacket | quality)
Bookmark and Share Feedback Print
 
ಕಳಪೆ ಗುಣಮಟ್ಟದ ಗುಂಡು ನಿರೋಧಕ ಜಾಕೇಟ್‌ಗಳಿಂದ ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ ಸಾವಿಗೆ ಕಾರಣವಾಗಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ,ಮಹಾರಾಷ್ಟ್ರ ಸರಕಾರ ಕೇಂದ್ರದಿಂದ ಪ್ರಮಾಣಪತ್ರ ಪಡೆದ ಕಂಪೆನಿಯಿಂದ ಅತ್ಯುತ್ತಮ ಗುಣಮಟ್ಟದ 2 ಸಾವಿರ ಗುಂಡುನಿರೋಧಕ ಜಾಕೇಟ್‌ಗಳನ್ನು ಖರೀದಿಸಲು ಮುಂದಾಗಿದೆ.

ಗುಂಡು ನಿರೋಧಕ ಜಾಕೆಟ್‌‌ಗಳನ್ನು ಸರಬರಾಜು ಮಾಡುವ ಸಂಸ್ಥೆ, ಪ್ರಸ್ತುತ, ಗಡಿ ಭಧ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ ಹಾಗೂ ರಾಷ್ಟ್ರೀಯ ಭಧ್ರತಾ ದಳಗಳಿಗೆ ವಿತರಿಸುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಗುಂಡು ನಿರೋಧಕ ಜಾಕೆಟ್‌ಗಳನ್ನು ಖರೀದಿಸಲಾಗುವುದು ಎಂದು ಗೃಹ ಸಚಿವ ಆರ್‌.ಆರ್ ಪಾಟೀಲ್ ತಿಳಿಸಿದ್ದಾರೆ.
ಮುಂಬೈನಲ್ಲಿ ಉಗ್ರರು ದಾಳಿ ನಡೆಸಿದಾಗ ಕಾನೂನು ವ್ಯವಸ್ಥೆ ನಿರ್ವಹಣೆಯಲ್ಲಿ ಸರಕಾರ ವಿಫಲವಾಗಿದ್ದಲ್ಲದೇ ಕಳಪೆ ಗುಣಮಟ್ಟದ ಜಾಕೆಟ್‌ಗಳಿಂದಾಗಿ ಹೇಮಂತ್ ಕರ್ಕರೆ ಸೇರಿದಂತೆ ಹಲವು ಅಧಿಕಾರಿಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ಟೀಕೆಗೆ ಒಳಗಾಯಿತು.

ಕಳಪೆ ಗುಣಮಟ್ಟದ ಜಾಕೆಟ್‌ಗಳಿಂದಾಗಿಯೇ ತಮ್ಮ ಪತಿ ಸಾವನ್ನಪ್ಪಿದ್ದಾರೆ ಎಂದು ಹೇಮಂತ್ ಕರ್ಕರೆ ಪತ್ನಿ ಕವಿತಾ ಕರ್ಕರೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಉತ್ತಮ ಗುಣಮಟ್ಟದ ಜಾಕೆಟ್‌ಗಳ ದರ 20 ಸಾವಿರ ರೂಪಾಯಿಗಳಿಂದ 75 ಸಾವಿರ ರೂಪಾಯಿಗಳಾಗಿದ್ದು, ಉತ್ತಮವಾಗಿರುವುದನ್ನು ಖರೀದಿಸುವಂತೆ ಗೃಹ ಇಲಾಖೆಗೆ ಸೂಚಿಸಲಾಗಿದೆ. ಗುಣಮಟ್ಟದ ವಿಷಯದಲ್ಲಿ ಸಂಧಾನವಿಲ್ಲ. ಕೇಂದ್ರ ಭಧ್ರತಾ ಪಡೆಗಳು ಬಳಸುವಂತಹ ಜಾಕೆಟ್‌ಗಳನ್ನು ಬಳಸಲು ನಿರ್ಧರಿಸಿಲಾಗಿದೆ ಎಂದು ಗೃಹ ಸಚಿವ ಆರ್‌.ಆರ್ ಪಾಟೀಲ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ