ಅತಂತ್ರ ವಿಧಾನಸಭೆ ಘೋಷಣೆಯಾದ ಒಂದು ದಿನದ ನಂತರ, ಜಾರ್ಖಂಡ್ ಮುಕ್ತಿ ಮೋರ್ಚಾ ಅಧ್ಯಕ್ಷ ತಾವು ಮುಖ್ಯಮಂತ್ರಿ ಹುದ್ದೆಗೆ ಅಕಾಂಕ್ಷಿಯಾಗಿದ್ದು, ತಾವು ವಿರೋಧ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ,ಇತರ ಪಕ್ಷಗಳು ಮೀನಮೇಷ ಎಣಿಸುತ್ತಿವೆ.
ಪ್ರಮುಖ ಪಕ್ಷಗಳಾದ ಕಾಂಗ್ರೆಸ್ -ಜೆವಿಎಂ(ಪಿ)ಮೈತ್ರಿ, ಜಾರ್ಖಂಡ್ ವಿಧಾನಸಭೆಯ 81 ಸೀಟುಗಳಲ್ಲಿ, 25 ಸೀಟುಗಳನ್ನು ಮಡಿಲಿಗೆ ಸೇರಿಸಿಕೊಂಡಿದೆ. ಬಿಜೆಪಿ-ಜೆಡಿ(ಯು) ಮೈತ್ರಿಕೂಟ 20 ಸೀಟುಗಳನ್ನು ಗೆದ್ದಿದೆ. 18 ಕ್ಷೇತ್ರಗಳಲ್ಲಿ ಗೆಲುವು ಪಡೆದ ಜೆಎಂಎಂ ಮನಒಲಿಸಲು ಪ್ರಯತ್ನಿಸುತ್ತಿವೆ. ಆದರೆ ಮುಖ್ಯಮಂತ್ರಿ ಹುದ್ದೆ ತಮಗೆ ನೀಡಿದಲ್ಲಿ ಮಾತ್ರ ಸಂಧಾನಕ್ಕೆ ಸಿದ್ಧ ಎಂದು ಸೋರೆನ್ ಹೇಳಿದ್ದಾರೆ.
ಚುನಾವಣೆಯಲ್ಲಿ ಜೆಎಂಎಂ ಪಕ್ಷ ಅತಿ ಹೆಚ್ಚು ಸ್ಥಾನಗಳಿಸಿದ್ದರಿಂದ ಸರಕಾರ ರಚಿಸಲು ಅಹ್ವಾನಿಸಬೇಕು. ಮುಖ್ಯಮಂತ್ರಿ ಹುದ್ದೆಯಲ್ಲಿ ಯಾವುದೇ ರಾಜಿಯಿಲ್ಲ ಎಂದು ಜೆಎಂಎಂ ಮೂಲಗಳು ತಿಳಿಸಿವೆ.
ಸೋರೆನ್ ಮುಖ್ಯಮಂತ್ರಿ ಹುದ್ದೆಗೆ ಒತ್ತಾಯಿಸುತ್ತಿರುವುದರಿಂದ, ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಎದುರಾಗಿದ್ದು, ಅವಸರವಿಲ್ಲ ಕಾದುನೋಡಬೇಕಾಗಿದೆ ಎಂದು ಕೇಂದ್ರ ಸಚಿವ ಸುಬೋಧ್ ಕಾಂತ್ ಸಹಾಯ್ ಹೇಳಿದ್ದಾರೆ.