ಉತ್ತರ ಭಾರತದ ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು,ಉತ್ತರ ಪ್ರದೇಶದ ಘಾಸಿಪುರ ಜಿಲ್ಲೆಯಲ್ಲಿ ಇಬ್ಬರು ಚಳಿಯಿಂದಾಗಿ ಸಾವನ್ನಪ್ಪಿದ್ದಾರೆ.
ಭಾನುವಾರ ತಾಪಮಾನ 5.2ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಚಳಿಯ ಅಟ್ಟಹಾಸ ರಾಜಧಾನಿ ದೆಹಲಿಯಲ್ಲಿಯೂ ಆವರಿಸಿದೆ. ಬೆಳಗ್ಗಿನಿಂದಲೇ ದೆಹಲಿಯಲ್ಲಿ ಮಂಜು ಕವಿದ ವಾತಾವರಣವಿದ್ದರೂ ವಿಮಾನಯಾನಕ್ಕೆ ಯಾವುದೇ ತೊಂದರೆಯಾಗಿಲ್ಲ.
ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳಲ್ಲಿಯೂ ಚಳಿಗಾಳಿ ವಿಪರೀತವಾಗಿ ಬೀಸುತ್ತಿದೆ. ಲೇಹ್‌ನಲ್ಲಿ ಋಣಾತ್ಮಕ 19.4 ಹಾಗೂ ಕಾರ್ಗಿಲ್‌ನಲ್ಲಿ 14ಡಿಗ್ರಿಯಷ್ಟಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ವರ್ಷ ಬೀಸಿದ ಭಾರೀ ಚಳಿಗಾಳಿಗೆ ದೇಶಾದ್ಯಂತ 50ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.