ಭಾರತೀಯ ಜನತಾ ಪಕ್ಷದ ಮುಖಂಡರಾದ ಎಲ್.ಕೆ ಅಡ್ವಾಣಿಯವರನ್ನು ಬಿಜೆಪಿ ಸಂಸದೀಯ ಸಮಿತಿಯ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ನಾಯಕ ಕೆ.ಎನ್.ಗೋವಿಂದಾಚಾರ್ಯ ಹೇಳಿದ್ದಾರೆ.
ಅಡ್ವಾಣಿಯವರನ್ನು ವಿರೋಧ ಪಕ್ಷದ ನಾಯಕನಿಂದ ಕೆಳಗಿಳಿಸಲಾಗಿಲ್ಲ. ಆದರೆ ಅವರಿಗೆ ಬಡ್ತಿ ನೀಡಲಾಗಿದ್ದು, ಬಿಜೆಪಿ ಸಂಸದೀಯ ಸಮಿತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಈ ಮೊದಲು, ಅಡ್ವಾಣಿ ಲೋಕಸಭೆಯಲ್ಲಿ ವಿರೋಧ ಪಕ್ಷದ ಏಕೈಕ ನಾಯಕರಾಗಿದ್ದರು. ಆದರೆ ಇದೀಗ ಪಕ್ಷದ ನೀತಿಗಳಲ್ಲಿ ಮಾರ್ಪಾಟು ತರಲಾಗಿದ್ದು, ಲೋಕಸಭೆ ಹಾಗೂ ರಾಜ್ಯಸಭೆಯ ಬಿಜೆಪಿ ಸಂಸದೀಯ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ ಎಂದು ತಿಳಿಸಿದ್ದಾರೆ.
ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಚುನಾಯಿತ ನಾಯಕರಾಗಿರಲಿಲ್ಲ. ಆದರೆ ಅಡ್ವಾಣಿಯವರಿಂದ ನೇಮಕಗೊಂಡಿದ್ದರು.
66 ವರ್ಷ ವಯಸ್ಸಿನ ಗೋವಿಂದಾಚಾರ್ಯ, ಪಕ್ಷದ ಮುಖಂಡರೊಂದಿಗಿನ ಭಿನ್ನಮತದಿಂದಾಗಿ ಕಳೆದ 9 ವರ್ಷಗಳ ಹಿಂದೆ ಪಕ್ಷವನ್ನು ತೊರೆದಿದ್ದರಲ್ಲದೇ 2004ರಲ್ಲಿ ನಡೆಯ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಕಳಪೆ ಫಲಿತಾಂಶದಿಂದಾಗಿ ವಾಜಪೇಯಿ ಮತ್ತು ಅಡ್ವಾಣಿಯವರು ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು.