ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ನಾಯಕ ಶಿಬು ಸೋರೆನ್ ಮೂರನೇ ಬಾರಿಗೆ ಬುಧವಾರದಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜಾರ್ಖಂಡ್ ರಾಜ್ಯಪಾಲ ಕೆ.ಶಂಕರ್‌ನಾರಾಯಣನ್ ರವಿವಾರದಂದು ಸರಕಾರ ರಚಿಸುವಂತೆ ಅಹ್ವಾನ ನೀಡಿದ್ದು,ಜಾರ್ಖಂಡ್ ರಾಜ್ಯ ಘೋಷಣೆಯಾದ ನಂತರ ಮೂರನೇ ಬಾರಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿ, ಹ್ಯಾಟ್ರಿಕ್ ಬಾರಿಸಲಿದ್ದಾರೆ.
ಬಿಜೆಪಿ ಹಾಗೂ ಆಲ್ ಜಾರ್ಖಂಡ್ ಸ್ಟುಟೆಂಡ್ಸ್ ಯುನಿಯನ್ ಮತ್ತು ಬಂಧು ಟಿರ್ಕೆ ಪಕ್ಷಗಳು ಸೋರೆನ್‌ಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ರಾಜ್ಯಪಾಲರು, ಸೋರೆನ್‌ಗೆ ಸರಕಾರ ರಚಿಸುವಂತೆ ಅಹ್ವಾನ ನೀಡಿದ್ದಾರೆ.
ನಂತರ, ಸಂಯುಕ್ತ ಜನತಾ ದಳ ಕೂಡಾ ಶಾಸಕರ ಬೆಂಬಲ ಪತ್ರ ನೀಡಿದ್ದರಿಂದ, ಶಾಸನಸಭೆಯಲ್ಲಿ ಜೆಎಂಎಂಗೆ ಒಟ್ಟು 81 ಶಾಸಕ ಬಲದಲ್ಲಿ 44 ಶಾಸಕರ ಬೆಂಬಲ ದೊರೆತಂತಾಗಿದೆ.