ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚುನಾವಣೆ ಹತ್ರ ಸರ್ಕಾರಿ ಜಾಹೀರಾತು ನಿಷೇಧಿಸಿ: ಗೋಪಾಲಸ್ವಾಮಿ (N Gopalswami | CEC | India | Election advt)
Bookmark and Share Feedback Print
 
ಚುನಾವಣೆ ಹತ್ತಿರ ಬರುತ್ತಿದ್ದಂತೆ ಹರಿದು ಬರುವ ಸರಕಾರಿ ಪರ ಜಾಹೀರಾತುಗಳಿಗೆ ನಿಷೇಧ ಹೇರಬೇಕು ಎಂದು ಹಲವಾರು ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿ ವಿವಾದಕ್ಕೀಡಾಗಿದ್ದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ ಆಗ್ರಹಿಸಿದ್ದಾರೆ.

ವಡೋದರದಲ್ಲಿ ನಡೆದ 'ಚುನಾವಣಾ ಕಾರ್ಯಸೂಚಿ' ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ಅವರು, ಚುನಾವಣೆಗೆ ಆರು ತಿಂಗಳು ಅಂತರವಿದ್ದಾಗ ಸರಕಾರಿ ಪರ ಜಾಹೀರಾತುಗಳನ್ನು ಯಾವುದೇ ಮಾಧ್ಯಮಗಳಲ್ಲಿ ಪ್ರಸಾರ ಮಾಡಲು ಅವಕಾಶ ನೀಡಬಾರದು. ಇಲ್ಲಿ ಸರಕಾರಗಳು ಹೆಚ್ಚೆಚ್ಚು ಜಾಹೀರಾತು ನೀಡುವ ಮೂಲಕ ಲಾಭ ಮಾಡಲೆತ್ನಿಸುತ್ತವೆ. ಇಲ್ಲಿ ಕಟ್ಟುನಿಟ್ಟಿನ ಕ್ರಮದ ಅಗತ್ಯವಿದೆ ಎಂದರು.

ರಾಜಕೀಯವನ್ನು ಅಪರಾಧಮುಕ್ತಗೊಳಿಸುವುದು, ವ್ಯಕ್ತಿಯೊಬ್ಬ ಸ್ಪರ್ಧಿಸಬಹುದಾದ ಕ್ಷೇತ್ರಗಳ ಸಂಖ್ಯೆಗಳಿಗೆ ಕಡಿವಾಣ ಹಾಕುವುದು, ಚುನಾವಣೋತ್ತರ ಸಮೀಕ್ಷೆ, ಅಭಿಮತ ಸಮೀಕ್ಷೆ, ಮುದ್ರಣ ಮಾಧ್ಯಮದಲ್ಲಿ ಪ್ರತಿನಿಧಿಗಳ ಜಾಹೀರಾತುಗಳಿಗೆ ನಿಷೇಧ ಹೇರುವುದು ಸೇರಿದಂತೆ ಹಲವು ಮಾರ್ಪಾಡುಗಳನ್ನು ಚುನಾವಣಾ ಕಾರ್ಯಸೂಚಿಯಲ್ಲಿ ಮಾಡುವ ಅಗತ್ಯವನ್ನು ಗೋಪಾಲಸ್ವಾಮಿ ಒತ್ತಿ ಹೇಳಿದ್ದಾರೆ.

ಅಲ್ಲದೆ ಪಕ್ಷದ ಖಾತೆಗಳನ್ನು ತನಿಖೆಗೊಳಪಡಿಸುವುದು, ಚುನಾವಣೆ ಸಮೀಪ ಸರಕಾರಿ ಪ್ರಾಯೋಜಿತ ಜಾಹೀರಾತುಗಳ ಪ್ರಸಾರಕ್ಕೆ ನಿಷೇಧ, ಆಯ್ಕೆಯಿಲ್ಲದ ಮತದಾನಕ್ಕೆ ಷರತ್ತು, ಟೀವಿ ಚಾನೆಲ್‌ಗಳಲ್ಲಿ ರಾಜಕೀಯ ಜಾಹೀರಾತುಗಳಿಗೆ ನಿಷೇಧ ಮತ್ತು ಪಕ್ಷಾಂತರ ವಿರೋಧಿ ಪ್ರಕರಣಗಳ ಕುರಿತು ನಿರ್ಧಾರ ಮುಂತಾದ ನೀತಿಗಳೂ ಜಾರಿಗೆ ಬರಬೇಕೆನ್ನುವುದು ಅವರ ಆಗ್ರಹ.

ಶೇ.50ಕ್ಕಿಂತ ಹೆಚ್ಚು ಮತಗಳನ್ನು ಪಡೆದರೆ ಮಾತ್ರ ಅಥವಾ ಪಡೆದಲ್ಲಿ ವಿಜಯಿ ಅಭ್ಯರ್ಥಿ ಎಂದು ಘೋಷಿಸಬೇಕೆಂಬ ನ್ಯಾಯಸಮ್ಮತ ತೀರ್ಮಾನಕ್ಕೆ ಬರಬೇಕೆನ್ನುವುದು ಅವರ ಮತ್ತೊಂದು ಪ್ರಸ್ತಾಪ.
ಸಂಬಂಧಿತ ಮಾಹಿತಿ ಹುಡುಕಿ