ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಡ್ಗಾಂವ್ ಸ್ಫೋಟದಲ್ಲಿ ಹಿಂದೂ ಸಂಘಟನೆ: ಗೋವಾ ಸಿಎಂ (Margao blast | Sanatan Sanstha | Digamber Kamat | Hindu right-wing organisation)
Bookmark and Share Feedback Print
 
ಕಳೆದ ವರ್ಷದ ಮಡ್ಗಾಂವ್ ಸ್ಫೋಟ ಪ್ರಕರಣದಲ್ಲಿ ಹಿಂದೂ ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆ ಕೈವಾಡವಿರುವುದನ್ನು ಸಿಬಿಐ ಕಂಡುಕೊಂಡಿದೆ ಎಂದು ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ಹೇಳಿದ್ದಾರೆ. ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಂಸ್ಥೆ, ಇದು ಹಿಂದೂ ಸಂಘಟನೆಗೆ ಮಸಿ ಬಳಿಯುವ ಯತ್ನವಾಗಿದ್ದು, ಸರಕಾರದಲ್ಲಿ ಅಂತಹ ಪುರಾವೆಗಳಿದ್ದರೆ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದೆ.
Goa map
PR


ಶಿರ್ಡಿ ಸಾಯಿಬಾಬಾ ದರ್ಶನಕ್ಕೆ ತೆರಳಿದ್ದ ಕಾಮತ್ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಮಹಾರಾಷ್ಟ್ರ ಮತ್ತು ಕರ್ನಾಟಕಗಳಲ್ಲಿ ಸಿಬಿಐ ನಡೆಸಿರುವ ತನಿಖೆಗಳಲ್ಲಿ ಮಡ್ಗಾಂವ್ ಸ್ಫೋಟದ ಹಿಂದೆ ಸನಾತನ ಸಂಸ್ಥೆ ಭಾಗವಹಿಸಿರುವ ಸಾಕ್ಷ್ಯಗಳನ್ನು ಕಲೆ ಹಾಕಿದೆ ಎಂದು ತಿಳಿಸಿದರು.

2009ರ ದೀಪಾವಳಿಗೂ ಮೊದಲು ನಡೆದ ಈ ಸ್ಫೋಟದಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರು. ನಿರ್ದಿಷ್ಟ ಸ್ಥಳದಲ್ಲಿ ಬಾಂಬ್ ಇಡಲು ಹೋಗುತ್ತಿದ್ದಾಗ ಅಕಸ್ಮಾತ್ ಸ್ಫೋಟ ಉಂಟಾದ ಕಾರಣ ಸನಾತನ ಸಂಸ್ಥೆಗೆ ಸೇರಿದ ಆರೋಪಿಗಳೇ ಬಲಿಯಾಗಿದ್ದರು ಎಂದು ಗೋವಾ ಪೊಲೀಸರು ಹೇಳಿದ್ದರು.

ಈ ಬಗ್ಗೆ ಸಿಬಿಐ ವರದಿ ಸಲ್ಲಿಸಿದ ನಂತರ ಹಿಂದೂ ಬಲಪಂಥೀಯ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾಮತ್ ಹೇಳಿದ್ದಾರೆ.

ಮಸಿ ಬಳಿಯುವ ಯತ್ನ: ಸನಾತನ ಸಂಸ್ಥೆ
ಗೋವಾ ಮುಖ್ಯಮಂತ್ರಿಯವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಸನಾತನ ಸಂಸ್ಥೆ, ಕಾಮತ್ ಹೇಳಿಕೆ ಆಧಾರರಹಿತವಾದದ್ದು ಎಂದು ಪ್ರತಿಕ್ರಿಯಿಸಿದೆ.

ಕಾಮತ್ ಮಾಡಿರುವ ಆರೋಪಗಳನ್ನು ಸಾಬೀತುಪಡಿಸುವ ಸಾಕ್ಷ್ಯಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಎಂದು ಸಂಸ್ಥೆಯ ವಕ್ತಾರ ಅಭಯ್ ವರ್ತಕ್ ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಯವರು ಸನಾತನ ಸಂಸ್ಥೆಯ ಘನತೆ-ಗೌರವಕ್ಕೆ ಮಸಿ ಬಳಿಯುವ ಮೂಲಕ ತನ್ನ ರಾಜಕೀಯ ಇಚ್ಛಾಶಕ್ತಿಯನ್ನು ವೃದ್ಧಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಅವರು ತಿರುಗೇಟು ನೀಡಿದರು.

ಮಡ್ಗಾಂವ್ ಸ್ಫೋಟದಲ್ಲಿ ಖಂಡಿತಾ ಸಂಸ್ಥೆ ಕೈವಾಡವಿಲ್ಲ. ಮುಖ್ಯಮಂತ್ರಿ ಮಾಡಿರುವ ಆರೋಪ ಕೇವಲ ರಾಜಕೀಯ ಹೇಳಿಕೆಯಲ್ಲ, ಅವರಿಗೆ ಹಿಂದೂ ಸಂಘಟನೆಯ ಹೆಸರು ಕೆಡಿಸುವ ಉದ್ದೇಶವೂ ಇದೆ ಎಂದು ವರ್ತಕ್ ಆರೋಪಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ