ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಥೋಡ್‌‌ಗೆ ಜಾಮೀನು ನಿರಾಕರಣೆ; ಆದ್ರೂ ಬಂಧಿಸಲ್ಲ-ಸಿಟ್ (SIT | Haryana DGP | SPS Rathore | Ruchika Girhotra)
Bookmark and Share Feedback Print
 
ಬಾಲಕಿ ರುಚಿಕಾ ಗಿರೋತ್ರಾ ಲೈಂಗಿಕ ಕಿರುಕುಳ ಮತ್ತು ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಹರ್ಯಾಣ ಮಾಜಿ ಡಿಜಿಪಿ ಎಸ್‌ಪಿಎಸ್ ರಾಥೋಡ್ ಅವರಿಗೆ ಸ್ಥಳೀಯ ನ್ಯಾಯಾಲಯವೊಂದು ಜಾಮೀನು ನಿರಾಕರಿಸಿದರೂ, ಅವರನ್ನು ತಕ್ಷಣಕ್ಕೆ ಬಂಧಿಸುವುದಿಲ್ಲ ಎಂದು ವಿಶೇಷ ತನಿಖಾ ದಳ (ಸಿಟ್) ಹೇಳಿದೆ.

ನ್ಯಾಯಾಲಯವು ಮಾಜಿ ಐಪಿಎಸ್ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಳ್ಳಿ ಹಾಕಿದ ಬೆನ್ನಿಗೆ ಪ್ರತಿಕ್ರಿಯಿಸಿರುವ ಸಿಟ್, ತಾನು ಈ ಹಂತದಲ್ಲಿ ರಾಥೋಡ್ ಅವರನ್ನು ಬಂಧಿಸುವುದಿಲ್ಲ. ಹಾಗೆ ಮಾಡಿದಲ್ಲಿ ಅದು ಗಿರೋತ್ರಾ ಪ್ರಕರಣವನ್ನು ಸಿಬಿಐ ತನಿಖೆಗೆ ಮುಂದಾಗುವ ಮೊದಲೇ ನಾವು ಅತಿಕ್ರಮಿಸಿದಂತಾಗುತ್ತದೆ ಎಂದಿದೆ.

ಏಳು ಮಂದಿ ಸದಸ್ಯರ ಸಿಟ್ ತಂಡದ ಮುಖ್ಯಸ್ಥರಾಗಿರುವ ಎಸ್.ಎಸ್. ಕಪೂರ್ ಮಾತನಾಡುತ್ತಾ, ಆರೋಪಿಯನ್ನು ನಾವು ಈ ಹಂತದಲ್ಲಿ ವಶಕ್ಕೆ ತೆಗೆದುಕೊಳ್ಳುವುದಿಲ್ಲ. ಆ ಮೂಲಕ ಸಿಬಿಐ ತನಿಖೆಗೆ ಅಡ್ಡಿಯುಂಟುಮಾಡಲು ಇಷ್ಟಪಡುವುದಿಲ್ಲ. ಸಿಬಿಐ ಈ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಳ್ಳುವವರೆಗೆ ನಾವು ತನಿಖೆ ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.

ಅವರ ವಿರುದ್ಧ ದಾಖಲಾಗಿರುವ ಯಾವುದೇ ಪ್ರಕರಣ ಸಂಬಂಧ ಬಂಧಿಸಿದಲ್ಲಿ ಕೇವಲ 15 ದಿನಗಳ ಕಾಲ ಮಾತ್ರ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಸಲು ಅವಕಾಶವಿದೆ. ಹಾಗಾಗಿ ಈಗಲೇ ಬಂಧಿಸಿದರೆ ಮತ್ತು ಅದೇ ಹೊತ್ತಿಗೆ ಸಿಬಿಐ ತನಿಖೆ ಆರಂಭವಾದರೆ ಆಗ ಆರೋಪಿಯು ನ್ಯಾಯಾಂಗ ಬಂಧನದಲ್ಲಿರುತ್ತಾನೆ. ಇದರಿಂದ ಸಿಬಿಐ ತನಿಖೆಗೆ ಅಡ್ಡಿಯಾಗಬಹುದು ಎಂದು ಕಪೂರ್ ಹೇಳಿದರು.

ರಾಥೋಡ್ ಮತ್ತಿತರರನ್ನು ನಾವು ವಶಕ್ಕೆ ತೆಗೆದುಕೊಳ್ಳುವ ಸಿಬಿಐ ಹಕ್ಕುಗಳ ಮೇಲೆ ನಾವು ಅತಿಕ್ರಮಣಕ್ಕೆ ಇಚ್ಛಿಸುವುದಿಲ್ಲ ಎಂದರು.

14ರ ಹರೆಯದ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ, ಆತ್ಮಹತ್ಯೆಗೆ ಕುಮ್ಮಕ್ಕು, ಕುಟುಂಬದವರಿಗೆ ಕಿರುಕುಳ, ಕೊಲೆಯತ್ನ, ಶವಮಹಜರು ಪರೀಕ್ಷೆಯಲ್ಲಿ ಕೈವಾಡ ಮುಂತಾದ ಆರೋಪಗಳನ್ನು ಹೊತ್ತಿರುವ ರಾಥೋಡ್ ಪ್ರಕರಣವನ್ನು ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸು ಮಾಡಿದ ಬಳಿಕ ಸಿಬಿಐ ಕೇಸನ್ನು ತನಿಖೆಗೆ ಕೈಗೆತ್ತಿಕೊಳ್ಳಲಿದೆ.
ಸಂಬಂಧಿತ ಮಾಹಿತಿ ಹುಡುಕಿ