ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನೆಹರು ನೀತಿಗೆ ಟೀಕೆ: ತರೂರ್ ಮತ್ತೆ ಇಕ್ಕಟ್ಟಿಗೆ (Twitter | Jawaharlal Nehru | Shashi | Mahatma Gandhi)
Bookmark and Share Feedback Print
 
PTI
ಟ್ವಿಟ್ಟರ್‌ನಲ್ಲಿ ಮುಕ್ತ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ಸದಾ ವಿವಾದದಲ್ಲೇ ಇರುವ ವಿದೇಶಾಂಗ ಖಾತೆ ರಾಜ್ಯ ಸಚಿವ ಶಶಿ ತರೂರ್ ಇದೀಗ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ವಿದೇಶಾಂಗ ನೀತಿ ಕುರಿತು ಟೀಕಿಸಿದ ಪರಿಣಾಮ ಮತ್ತೆ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ದೆಹಲಿಯಲ್ಲಿ ಶುಕ್ರವಾರ ನಡೆದ ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ತರೂರ್, ಭಾರತದ ಪರಂಪರೆಯನ್ನೇ ಮೂಲವಾಗಿಟ್ಟು ಗಾಂಧಿ ಹಾಗೂ ನೆಹರು ವಿದೇಶಾಂಗ ನೀತಿ ರೂಪಿಸಿದ್ದರು. ಆ ಕಾರಣಕ್ಕಾಗಿಯೇ ಭಾರತ ಜಾಗತಿಕ ಮಟ್ಟದಲ್ಲಿ ಅಸ್ತಿತ್ವ ಕಂಡುಕೊಳ್ಳುವಂತಾಯಿತು. ಆದರೆ ವೀಕ್ಷಕ ವಿವರಣೆ ನೀಡುವ ರೀತಿಯಲ್ಲಿ ಇತರ ದೇಶಗಳ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸುವ ಭಾರತದ ವಿದೇಶಾಂಗ ನೀತಿ ಋಣಾತ್ಮಕ ಎಂದು ಜಗತ್ತಿನಲ್ಲಿ ಹೆಸರು ಪಡೆಯಿತು ಎಂದು ಹೇಳಿದ್ದರು.

ಆದರೆ ತರೂರ್ ನಡವಳಿಕೆ ನಮಗೆ ಅಚ್ಚರಿ ತರುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ಕಾಂಗ್ರೆಸ್ ಸದಸ್ಯರಾದ ತರೂರ್ ಪಂಡಿತ್ ಅವರು ಹಾಕಿಕೊಟ್ಟ ಪರಂಪರೆಯನ್ನೇ ಮುಂದುವರಿಸಿಕೊಂಡು ಹೋಗಬೇಕು ಎಂದು ಪಕ್ಷದ ವಕ್ತಾರ ಶಕೀಲ್ ಅಹ್ಮದ್ ಎಚ್ಚರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ