ಭಾರತ ಹಾಗೂ ಚೀನಾ ಗಡಿಯ ಲೈನ್ ಆಫ್ ಕಂಟ್ರೋಲ್‌ನ ಬಳಿಯ, ಕಳೆದ ಎರಡು ದಶಕಗಳಿಂದ ಚೀನಾ ಆಕ್ರಮಿಸಲು ಹವಣಿಸುತ್ತಿದ್ದ ಭಾರತದ ನೆಲ ಚೀನಾದ ವಶವಾಗಿದೆ ಎಂದು ವರದಿಯೊಂದು ಹೇಳಿದೆ.
ಇತ್ತೀಚೆಗೆ ಜಮ್ಮು-ಕಾಶ್ಮೀರ ಸರ್ಕಾರ, ಗೃಹ ಸಚಿವಾಲಯ ಹಾಗೂ ಭಾರತೀಯ ಸೇನಾ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದ್ದು, ಚೀನಾದಲ್ಲಿ ಮುದ್ರಿತವಾಗುತ್ತಿರುವ ದೇಶದ ಭೂಪಟಗಳಲ್ಲಿ ಭಾರತದ ನೆಲ,ಚೀನಾದ ಗಡಿಯೊಳಕ್ಕೆ ಸೇರಿರುವಂತೆ ಮುದ್ರಿಸಲಾಗಿದೆ ಎಂಬ ವಿಷಯದ ಗಹನವಾಗಿ ಚರ್ಚಿಸಲಾಗಿದೆ.
ಲೇಹ್ ಪ್ರಾಂತ್ಯದ ಆಯುಕ್ತ ಎ.ಕೆ.ಸಾಹು ಅಧ್ಯಕ್ಷತೆ ವಹಿಸಿದ್ದ ಆ ಸಭೆಯಲ್ಲಿ ಸೇನಾ ಉನ್ನತ ಅಧಿಕಾರಿಗಳಾದ 14ಬ್ರಿಗೇಡ್ ಶರತ್ ಚಂದ್ ಹಾಗೂ ಕರ್ನಲ್ ಇಂದರ್‌ಜಿತ್ ಸಿಂಗ್ ಭಾಗವಹಿಸಿದ್ದರು.
ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಭೂಪಟಗಳನ್ನು ಮುದ್ರಿಸುವಾಗ ಸಮರ್ಪಕ ಮಾರ್ಗಗಳನ್ನು ಅನುಸರಿಸದೇ ಇರುವುದನ್ನು ಎಲ್ಲರೂ ಅನುಮೋದಿಸಿದ್ದು, ದಶಕಗಳಿಂದ ವಿವಾದದ ಬಿಂದುವಾಗಿರುವ ಗಡಿಯಲ್ಲಿನ ಚೀನಾ ದುರಾಸೆಯ ಭಾರತದ ನೆಲವನ್ನು ಕಸಿಯಲು ಭೂಪಟದ ತಂತ್ರ ಅಳವಡಿಸಿಕೊಂಡಿರುವುದು ಸ್ಪಷ್ಟ ಎಂದು ಅಧಿಕಾರಿಗಳು ತಿಳಿಸಿದ್ದಾರೆ.