ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಪ್ಪಿ ಪ್ರಧಾನಿಯಾದ ಗೌಡ ದೇಶದ ಕ್ಷಮೆ ಯಾಚಿಸಲಿ: ಬಿಜೆಪಿ
(Ravi Shankar Prasad | HD Deve Gowda | Karnataka | B S Yeddyurappa)
ಜೆಡಿಎಸ್ ಮುಖಂಡ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನಿಂದನಾತ್ಮಕ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಅಕಸ್ಮತ್ತಾಗಿ ಪ್ರಧಾನಿ ಹುದ್ದೆಗೇರಿದ ಗೌಡರು ಆ ಸ್ಥಾನದ ಘನತೆ-ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಬೇಕಾಗಿದ್ದು, ಯಡಿಯೂರಪ್ಪ ವಿರುದ್ಧ ಬಳಸಿದ ಅವಹೇಳನಕಾರಿ ಶಬ್ದಗಳಿಗಾಗಿ ದೇಶದ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದೆ.
PTI
ಯಾವನ್ರಿ ಅವನು ಯಡಿಯೂರಪ್ಪ, ಬ್ಲಡಿ ಬಾಸ್ಟರ್ಡ್. ದುಡ್ಡಿಗಾಗಿ ಎಕ್ಕಡ ತಿನ್ನೋನು ನಾನಲ್ಲ. ನನ್ನ ಅಪ್ಪ ಈ ದೇವೇಗೌಡನನ್ನು ಅದಕ್ಕಾಗಿ ಹುಟ್ಟಿಸಿಲ್ಲ. ಯಡಿಯೂರಪ್ಪ ನನ್ನನ್ನು ಏನೂಂತ ತಿಳ್ಕೊಂಡಿದ್ದಾನೆ. ಮಾನ ಮರ್ಯಾದೆ ಇದೆಯಾ ಅವ್ನಿಗೆ. ಜೀವನವಿಡೀ ಹೋರಾಟ ಮಾಡಿಕೊಂಡು ಬಂದೋನು ನಾನು. ಬಿಜೆಪಿಗೆ ರಾಜೀನಾಮೆ ನೀಡ್ತೀನಿ, ಮಂತ್ರಿ ಮಾಡಿ ಅಂತ ಶೋಭಾ ಕರಂದ್ಲಾಜೆಯನ್ನು ನನ್ನ ಮನೆ ಬಾಗಿಲಿಗೆ ಕಳಿಸಿ ಭಿಕ್ಷೆ ಬೇಡಿದ ಬೋಸುಡಿ ಮಗ, ಈಗ ಏನ್ ಹೇಳ್ತಾನೆ ಎಂದೆಲ್ಲಾ ಕೋಪೋದ್ರಿಕ್ತರಾದ ದೇವೇಗೌಡರು ತೀರಾ ಕಳಪೆ ಭಾಷೆಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಬಳಸಿದ್ದರು.
ತಕ್ಷಣ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಬಿಜೆಪಿಯು, ಗೌಡರು ಕ್ಷಮೆ ಕೇಳಬೇಕೆಂದು ಆಗ್ರಹಿಸಿದೆ. ಗೌಡರು ಮುಖ್ಯಮಂತ್ರಿಯವರ ವಿರುದ್ಧ ಬಳಸಿದ ಭಾಷೆ ಸರಿಯಲ್ಲ, ಇದು ಖಂಡನಾರ್ಹ ಮತ್ತು ಪ್ರಜಾಪ್ರಭುತ್ವಕ್ಕೆ ಅವಮಾನ. ಇದಕ್ಕಾಗಿ ತಕ್ಷಣವೇ ಅವರು ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಗೌಡರು ಅಕಸ್ಮತ್ತಾಗಿ ಪ್ರಧಾನ ಮಂತ್ರಿ ಹುದ್ದೆಗೇರಿದವರು. ಅಂತಹ ಗೌರವದ ಹುದ್ದೆಗೇರಿದ ವ್ಯಕ್ತಿಯೊಬ್ಬ ಮಾಜಿಯಾಗಿರಬಹುದು ಅಥವಾ ಹಾಲಿಯಾಗಿರಬಹುದು, ಅವರು ಆ ಹುದ್ದೆಯ ಪಾವಿತ್ರ್ಯತೆ ಮತ್ತು ಘನತೆಯನ್ನು ನಡತೆಯಲ್ಲಿ ಮತ್ತು ಹೇಳಿಕೆಗಳಲ್ಲಿ ರಕ್ಷಿಸಿಕೊಳ್ಳಬೇಕು ಎಂದು ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಮಾಜಿ ಪ್ರಧಾನಿಯವರ ಹೇಳಿಕೆ ದೇಶಕ್ಕೆ ಮಾಡಿದ ಅವಮಾನ ಎಂದೂ ಪ್ರಸಾದ್ ಹೇಳಿದ್ದು, ಒಬ್ಬ ಚುನಾಯಿತ ಮುಖ್ಯಮಂತ್ರಿ ಮತ್ತು ಸಾಂವಿಧಾನಿಕ ಗೌರವ ಹುದ್ದೆಯಲ್ಲಿರುವ ಯಡಿಯೂರಪ್ಪನವರ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸುವ ಮೂಲಕ ಗೌಡರು ದೇಶದ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ ಎಂದರು.