ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರುಚಿಕಾ ಲೈಂಗಿಕ ಕಿರುಕುಳ ಪ್ರಕರಣ ಕೈಗೆತ್ತಿಕೊಂಡ ಸಿಬಿಐ (Ruchika Girhotra | SPS Rathore | SC Girhotra | CBI)
Bookmark and Share Feedback Print
 
ಹರ್ಯಾಣ ಮಾಜಿ ಡಿಜಿಪಿ ಎಸ್.ಪಿ.ಎಸ್. ರಾಥೋಡ್‌ರಿಂದ ಲೈಂಗಿಕ ಕಿರುಕುಳಕ್ಕೊಳಗಾಗಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದ ಬಾಲಕಿ ರುಚಿಕಾ ಗಿರೋತ್ರಾ ಪ್ರಕರಣಗಳನ್ನು ಸೋಮವಾರ ಸಿಬಿಐ ಕೈಗೆತ್ತಿಕೊಂಡಿದ್ದು, ಎಲ್ಲಾ ಕೇಸುಗಳ ತನಿಖೆಗಳನ್ನೂ ನಡೆಸಲಿದೆ.

ರಾಥೋಡ್ ವಿರುದ್ಧ ಸೆಕ್ಷನ್ 306ರ ಅಡಿಯಲ್ಲಿ ಒಂದು ಪ್ರಕರಣ ಮತ್ತು ಇತರೆಡು ಪ್ರಕರಣಗಳು ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯನಾಶಗಳ ಕುರಿತು ದಾಖಲಾಗಿವೆ. ರಾಥೋಡ್ ಮತ್ತು ಹರ್ಯಾಣ ಪೊಲೀಸ್ ತಂಡದ ಮೇಲೆ ದಾಖಲಾಗಿರುವ ಕೊಲೆಯತ್ನ ಪ್ರಕರಣವನ್ನೂ ತನಿಖೆ ನಡೆಸಲಾಗುತ್ತದೆ ಎಂದು ಸಿಬಿಐ ತಿಳಿಸಿದೆ.
PTI


ಇದರಲ್ಲಿ ರುಚಿಕಾ ಸಹೋದರ ಆಶು ಎಂಬಾತನ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಜೈಲಿಗಟ್ಟಿರುವುದು, ಕುಟುಂಬಕ್ಕೆ ಕಿರುಕುಳ ಮುಂತಾದ ಪ್ರಕರಣಗಳೂ ಸೇರಿವೆ.

ಪಂಚಕುಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ. ಸಿಂಗ್ ಅವರ ವಿರುದ್ಧವೂ ತನಿಖೆ ನಡೆಸಲಾಗುತ್ತದೆ. ಎಲ್ಲಾ ಪ್ರಕರಣಗಳನ್ನು ಮರು ದಾಖಲಿಸಿಕೊಳ್ಳಲಾಗುತ್ತದೆ ಎಂದು ಕೇಂದ್ರೀಯ ತನಿಖಾ ದಳ ತಿಳಿಸಿದೆ.

ಹರ್ಯಾಣ ಸರಕಾರದ ಮನವಿಯಂತೆ ದೆಹಲಿ ವಿಶೇಷ ಪೊಲೀಸ್ ಇಲಾಖಾ ಕಾಯ್ದೆಯ ಸೆಕ್ಷನ್ 5ರಡಿಯಲ್ಲಿ ಕೇಂದ್ರ ಸರಕಾರವು ಪ್ರಕರಣಕ್ಕೆ ಅಂಗೀಕಾರ ನೀಡಿದ ಬಳಿಕ ನಾವು ರುಚಿಕಾ ಗಿರೋತ್ರಾಗೆ ಸಂಬಂಧಿಸಿದ ಎಲ್ಲಾ ಮೂರು ಪ್ರಕರಣಗಳನ್ನು ಮರು ದಾಖಲಿಸಿಕೊಂಡಿದ್ದೇವೆ ಎಂದು ಸಿಬಿಐ ವಕ್ತಾರರು ವಿವರಣೆ ನೀಡಿದ್ದಾರೆ.

ಈ ನಡುವೆ ರಾಥೋಡ್ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮೊರೆ ಹೋಗಿದ್ದು, ತನ್ನ ವಿರುದ್ಧ ದಾಖಲಾಗಿರುವ ಎರಡು ಪ್ರಕರಣಗಳಲ್ಲಿ ಜಾಮೀನು ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ. ಮಂಗಳವಾರ ಇದರ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ.

14ರ ಹರೆಯದ ಪ್ರತಿಭಾವಂತ ಟೆನಿಸ್ ಆಟಗಾರ್ತಿಯಾಗಿದ್ದ ರುಚಿಕಾಳಿಗೆ 1990ರಲ್ಲಿ ರಾಥೋಡ್ ಲೈಂಗಿಕ ಕಿರುಕುಳ ನೀಡಿದ್ದರು. ಇದರ ಹಿನ್ನೆಲೆಯಲ್ಲಿಯೇ ಆಕೆಯನ್ನು ಶಾಲೆಯಿಂದ ಅವರು ವಜಾ ಮಾಡಿಸಿದ್ದರು ಎಂದೂ ಆರೋಪಿಸಲಾಗಿದೆ.

19 ವರ್ಷಗಳ ಹಿಂದೆ ಮಾಡಿದ ಅಪರಾಧ 2009ರ ಡಿಸೆಂಬರ್ 21ರಂದು ಸಾಬೀತಾಗಿತ್ತು ಮತ್ತು ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ಹಾಗೂ 1,000 ರೂಪಾಯಿ ದಂಡವನ್ನು ನ್ಯಾಯಾಲಯ ವಿಧಿಸಿತ್ತು.

ತೀರ್ಪಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೆ ಮರು ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ