ಅಕ್ರಮ ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಾಧೀಶ ಪಿ.ಡಿ.ದಿನಕರನ್ ಅವರ ಹೆಸರನ್ನು ಸುಪ್ರೀಂ ನ್ಯಾಯಾಧೀಶರ ಹುದ್ದೆಗೆ ಶಿಫಾರಸು ಮಾಡಿದ್ದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಆಯ್ಕೆ ಸಮಿತಿಯ ತಪ್ಪು ಎಂದು ಮುಖ್ಯನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಯಾವುದೇ ನ್ಯಾಯಾಧೀಶ ಜಮೀನು ಕಬಳಿಸಿದ್ದರೆ ಅಥವಾ ಭ್ರಷ್ಟಾಚಾರ ಎಸಗಿದ್ದರೆ ಆತ ಬಡ್ತಿಗೆ ಅನರ್ಹ ಎಂದು ಹೇಳಿದರು.
ದಿನಕರನ್ ಪ್ರಕರಣ ಕೂಡ ನ್ಯಾಯಾಂಗದ ಮೇಲಿನ ವಿಶ್ವಾರ್ಹತೆಗೆ ಕುಂದುಂಟು ಮಾಡಿದೆಯೇ ಎಂಬ ಪ್ರಶ್ನೆಗೆ, ನಾವು ತಪ್ಪು ಮಾಡಿದ್ದೇವೆ. ಅದನ್ನೀಗ ಸರಿಪಡಿಸಿಕೊಳ್ಳಬೇಕಾಗಿದೆ ಎಂದರು. ದಿನಕರನ್ ಅವರ ಹೆಸರು ಶಿಫಾರಸು ಮಾಡಿದ ವೇಳೆ ಅವರ ವಿರುದ್ಧ ಯಾವುದೇ ಆರೋಪಗಳಿರಲಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದರು.