ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಜಾ ವಿರೋಧಿಸಿದ ದಡೂತಿ ಗಗನಸಖಿ ನ್ಯಾಯಾಲಯಕ್ಕೆ..! (Overweight airhostess | termination order | NACIL | Sangita Garb)
Bookmark and Share Feedback Print
 
ಮಿತಿ ಮೀರಿದ ತೂಕದಿಂದಾಗಿ ದಡೂತಿಯಾಗಿದ್ದ ಗಗನಸಖಿಯರನ್ನು ಸೇವೆಯಿಂದ ತೆಗೆದುಹಾಕಿದ್ದ ಇಂಡಿಯನ್ ಏರ್‌ಲೈನ್ಸ್ ಇದೀಗ ಪೀಕಲಾಟಕ್ಕೆ ಸಿಕ್ಕಿಕೊಂಡಿದೆ. ಕೆಲಸ ಕಳೆದುಕೊಂಡಿರುವ ಗಗನಸಖಿಯೊಬ್ಬರು ಇದೀಗ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಭಾರತೀಯ ರಾಷ್ಟ್ರೀಯ ವೈಮಾನಿಕ ಸಂಸ್ಥೆಯೆಂದು ಹೆಸರು ಬದಲಾಯಿಸಿಕೊಂಡಿರುವ ಇಂಡಿಯನ್ ಏರ್‌ಲೈನ್ಸ್ ಕಳೆದ ವರ್ಷ 10 ಅಧಿಕ ಭಾರದ ಗಗನಸಖಿಯರ ಸೇವೆಯನ್ನು ಕಡಿತಗೊಳಿಸಿತ್ತು.

ಆದರೆ ವಿಮಾನಯಾನ ಸಂಸ್ಥೆಯ ಈ ನಿರ್ಧಾರ ನಮ್ಮ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿರುವ ಸಂಗೀತಾ ಗಾರ್ಬ್ ಎಂಬ 46ರ ಹರೆಯದ ಮಹಿಳೆ, ನ್ಯಾಯಾಲಯದ ಕದ ತಟ್ಟಿದ್ದಾರೆ. ಅವರು 25 ವರ್ಷಗಳ ಕಾಲ ಈ ಸಂಸ್ಥೆಯಲ್ಲಿ ಗಗನಸಖಿಯಾಗಿ ಕಾರ್ಯನಿರ್ವಹಿಸಿದ್ದರು.

ಉದ್ಯೋಗಿಯ ಗಮನಕ್ಕೆ ತರದೆ ಸೇವೆಯಿಂದ ಮುಕ್ತಗೊಳಿಸುವ ಆಡಳಿತದ ಆದೇಶವು ಅಕ್ರಮ, ನಿರಂಕುಶ ಮತ್ತು ನಿಯಮಗಳು ಹಾಗೂ ಆದೇಶಗಳಿಗೆ ವಿರುದ್ಧವಾದುದು ಎಂದು ಆಕೆಯ ವಕೀಲ ಅರವಿಂದ್ ಕುಮಾರ್ ಶರ್ಮಾ ವಾದಿಸಿದ್ದಾರೆ.

ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ನ್ಯಾಯಾಧೀಶ ಎಸ್.ಎನ್. ಅಗರ್ವಾಲ್, ವಿಮಾನಯಾನ ಸಂಸ್ಥೆಗೆ ನೊಟೀಸ್ ಜಾರಿ ಮಾಡಿದ್ದು, ಜನವರಿ 22ರೊಳಗೆ ಉತ್ತರಿಸುವಂತೆ ಆದೇಶ ನೀಡಿದೆ.

ಇದೀಗ 'ಏರ್ ಇಂಡಿಯಾ'ದೊಂದಿಗೆ ಸೇರಿಕೊಂಡಿರುವ ಇಂಡಿಯನ್ ಏರ್‌ಲೈನ್ಸ್ ತನ್ನ ನೇಮಕಾತಿ ಆದೇಶ ಪತ್ರದಲ್ಲಿ ಪೋಷಾಕಿನನಿಬಂಧನೆಗಳನ್ನು ಒಳಗೊಂಡಿದ್ದು, ಇದೇ ಆಧಾರದಲ್ಲಿ ಅಧಿಕ ಭಾರ ಹೊಂದಿರುವವರ ಸೇವೆಗಳನ್ನು ಕಡಿತಗೊಳಿಸಲು ಯತ್ನಿಸಿತ್ತು ಎಂದಿದ್ದಾರೆ.

ಅತ್ತ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ವಿಮಾನಯಾನ ಸಂಸ್ಥೆ, ವೈದ್ಯಕೀಯ ಮಂಡಳಿಯು ಗಗನಸಖಿಯರ ಕುರಿತು ಅಸಮರ್ಥ ಪ್ರಮಾಣಪತ್ರವನ್ನು ನೀಡಿದ ಬಳಿಕವಷ್ಟೇ ವಜಾಗೊಳಿಸಲಾಗಿದೆ ಮತ್ತು ಅವರಿಗೆ ಇತರ ಕೆಲಸಗಳನ್ನು ನಿರ್ವಹಿಸುವಂತೆ ಸೂಚಿಸಿದರೂ, ಅದಕ್ಕೆ ಗಗನಸಖಿಯರು ಒಪ್ಪಿಗೆ ಸೂಚಿಸಿರಲಿಲ್ಲ ಎಂದಿದೆ.

18 ವರ್ಷದ 152 ಸೆಂಟೀ ಮೀಟರ್ ಎತ್ತರವಿರುವ ಗಗನಸಖಿಯೊಬ್ಬಳು 50 ಕೇಜಿ ತೂಕ ಹೊಂದಿರಲು ಅವಕಾಶವಿದೆ. 152 ಸೆಂಟಿ ಮೀಟರ್ ಎತ್ತರವಿರುವ 26ರಿಂದ 30ರೊಳಗಿನ ಗಗನಸಖಿ 56 ಕೇಜಿಯನ್ನು ಮೀರಬಾರದು ಎಂದು ವಿಮಾನಯಾನ ಸಂಸ್ಥೆಯ ನಿಯಮಗಳು ಹೇಳುತ್ತವೆ.
ಸಂಬಂಧಿತ ಮಾಹಿತಿ ಹುಡುಕಿ