ಹೀಗೊಂದು ಸಂಶೋಧನೆ ಬಹಿರಂಗಪಡಿಸಿದೆ. ಅದರ ಪ್ರಕಾರ ಬೇಗನೆ ಮೈ ನೆರೆಯುವ ಹುಡುಗಿಯರು ಕಳ್ಳತನ ಮಾಡೋದು, ಜಗಳ ಮಾಡೋದು ಮತ್ತು ಮಾದಕ ದ್ರವ್ಯ ಸೇವಿಸೋದು ಮುಂತಾದ ಅಕ್ರಮಗಳಲ್ಲಿ ಹೆಚ್ಚು ತೊಡಗುತ್ತಾರಂತೆ.
ಈ ಸಂಶೋಧನೆಯನ್ನು ನಡೆಸಿರುವುದು ಆಸ್ಟ್ರೇಲಿಯಾದ ಸಿಡ್ನಿಯ ಕ್ವೀನ್ಸ್‌ಲೆಂಡ್ ಯುನಿವರ್ಸಿಟಿ. ತಡವಾಗಿ ಋತುಮತಿಯಾಗುವ ಹುಡುಗಿಯರಿಗಿಂತ ಬೇಗನೆ ಮೈ ನೆರೆಯುವ ಹುಡುಗಿಯರ ವರ್ತನೆಯಲ್ಲಿ ಆಕ್ರಮಣಕಾರಿ ಪ್ರವೃತ್ತಿಯನ್ನು ಕಾಣಬಹುದು ಎಂದು ಅದು ವಿವರಣೆ ನೀಡಿದೆ.
12 ವರ್ಷದೊಳಗೆ ದೊಡ್ಡವರಾದ ಹುಡುಗಿಯರು ಕಳ್ಳತನಕ್ಕೆ ಮುಂದಾಗುವುದು, ಜಗಳಗಂಟಿ ಸ್ವಭಾವವನ್ನು ಮೈಗೂಡಿಸಿಕೊಳ್ಳುವುದು ಮತ್ತು ಉದ್ದೀಪನಾ ದ್ರವ್ಯಗಳನ್ನು ಸೇವಿಸುತ್ತಿರುವುದು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ ಎಂದು ಈ ಸಂಶೋಧನೆ ತನ್ನ ಫಲಿತಾಂಶದಲ್ಲಿ ವಿವರಿಸಿದೆ.
ಇಲ್ಲಿ ಬಹಿರಂಗಗೊಂಡಿರುವ ಮತ್ತೊಂದು ಅಂಶವೆಂದರೆ ಪ್ರೌಢಾವಸ್ಥೆಗೆ ತಲುಪುವ ಹುಡುಗ ಮತ್ತು ಹುಡುಗಿಯರ ವರ್ತನೆಯಲ್ಲಿ ಗಮನಾರ್ಹ ವ್ಯತ್ಯಾಸಗಳಿಲ್ಲದಿರುವುದು. ಈ ಅಧ್ಯಯನಕ್ಕಾಗಿ 8,000 ಮಂದಿ ತಾಯಂದಿರು ಮತ್ತು ಅವರ 21 ವರ್ಷ ಮೀರಿದ ಮಕ್ಕಳನ್ನು ಬಳಸಿಕೊಳ್ಳಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಸಮಾಜವಿರೋಧಿ ಪ್ರವೃತ್ತಿಗಳಲ್ಲಿ ಹುಡುಗಿಯರೂ ತೊಡಗಿಸಿಕೊಳ್ಳುತ್ತಿರುವುದು ಹೆಚ್ಚಿರುವುದರ ಹಿಂದೆ ಇಂತಹ ಕಾರಣಗಳಿವೆ. ಕುಡಿತ, ಧೂಮಪಾನ ಅಥವಾ ಮಾದಕ ಪದಾರ್ಥಗಳನ್ನು ಸೇವಿಸುವುದು ಮುಂತಾದುವು ಮಹಿಳೆಯರಲ್ಲೂ ಸಾಮಾನ್ಯವಾಗುತ್ತಿದೆ. ಇದಕ್ಕೆ ಹುಡುಗಿಯರು ಬೇಗನೆ ಋತುಮತಿಯಾಗುತ್ತಿರುವುದು ಕೂಡ ಕಾರಣ ಎಂದು ಸಂಶೋಧಕರೊಬ್ಬರು ಹೇಳಿದ್ದಾರೆ.