ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿಮಾನ ಅಪಹರಣಕಾರರಿಗಿನ್ನು ಮರಣ ದಂಡನೆ: ಕೇಂದ್ರ (Death penalty | GoM | India | plane hijackers)
Bookmark and Share Feedback Print
 
ತನ್ನ ಸಾದಾ ಮುಖವನ್ನು ಬದಲಿಸಿಕೊಳ್ಳಲು ಹೊರಟಿರುವ ಭಾರತವು ಇನ್ನು ಮುಂದೆ ವಿಮಾನ ಅಪಹರಣಕಾರರಿಗೆ ಮರಣ ದಂಡನೆ ವಿಧಿಸಲಿದೆ. ವೈಮಾನಿಕ ಭದ್ರತೆಗಾಗಿನ ಸಚಿವರ ಸಮೂಹದ ಸಭೆಯಲ್ಲಿ ಈ ಶಿಫಾರಸನ್ನು ಮಾಡಲಾಗಿದೆ.

ಗೃಹಸಚಿವ ಪಿ. ಚಿದಂಬರಂ, ಕಾನೂನು ಸಚಿವ ವೀರಪ್ಪ ಮೊಯ್ಲಿ ಮತ್ತು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರು ಪಾಲ್ಗೊಂಡಿದ್ದ ಈ ಸಚಿವರ ಸಮೂಹದ ಸಭೆಯಲ್ಲಿ 1982ರ ಅಪಹರಣ ತಡೆ ಕಾಯ್ದೆಗೂ ತಿದ್ದುಪಡಿ ತರಲು ಒಪ್ಪಿಗೆ ನೀಡಲಾಗಿದೆ.

ವಿಮಾನ ಅಪಹರಣಕಾರರಿಗೆ ಮರಣ ದಂಡನೆ ವಿಧಿಸುವುದಲ್ಲದೆ ಇತರ ಹಲವು ಕಠಿಣ ನಿರ್ಧಾರಗಳಿಗೂ ಸಚಿವರ ಸಮೂಹ ಬಂದಿದೆ. ಅಪಹರಣಕಾರರ ಜತೆ ಮಾತುಕತೆ ನಡೆಸದೇ ಇರುವುದು, ಅಪಹರಣಕ್ಕೊಳಗಾದ ವಿಮಾನವನ್ನು ಹೊಡೆದುರುಳಿಸುವುದು ಮತ್ತು ಅಪರಹಣಗೊಂಡ ವಿಮಾನಕ್ಕೆ ನಿಲ್ದಾಣದಿಂದ ಹೊರಡಲು ಅನುಮತಿ ನಿರಾಕರಿಸುವುದು ಇವುಗಳಲ್ಲಿ ಪ್ರಮುಖವಾದುವು.

ಯಾವುದೇ ದುಷ್ಕೃತ್ಯಗಳಿಗೆ ಅವಕಾಶ ಸಿಗದೇ ಇರುವ ಪರಿಸ್ಥಿತಿಯನ್ನು ನಿರ್ಮಿಸುವುದಾಗಿ ತನ್ನ ಮೊದಲ ಆಡಳಿತಾವಧಿಯಲ್ಲಿ ಭರವಸೆ ನೀಡಿದ್ದ ಮನಮೋಹನ್ ಸಿಂಗ್, ವಿಮಾನ ಅಪಹರಣ ತಡೆ ಪ್ರಸ್ತಾಪ ಮತ್ತು ಅಪಹರಣಕಾರರಿಗೆ ಕಠಿಣ ಶಿಕ್ಷೆಯನ್ನು ಶಿಫಾರಸು ಮಾಡುವುದಾಗಿ ಹೇಳಿದ್ದರು.

ನಾಗರಿಕ ವೈಮಾನಿನ ಸಚಿವಾಲಯವು ಸಿದ್ಧ ಪಡಿಸಿದ್ದ ಕರಡು ಪ್ರಸ್ತಾವನೆಯನ್ನು ಕಾರ್ಯದರ್ಶಿಗಳ ಸಮಿತಿಯು ಕೆಲ ತಿಂಗಳ ಹಿಂದೆ ಅನುಮೋದಿಸಿತ್ತು. ಬಳಿಕ ಈ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಸಚಿವರ ಸಮೂಹಕ್ಕೆ ಕಳುಹಿಸಿಕೊಡಲಾಗಿತ್ತು.

ಎನ್‌ಡಿಎ ಅಧಿಕಾರವಧಿಯ 1999ರಲ್ಲಿ 178 ಪ್ರಯಾಣಿಕರು ಮತ್ತು 11 ಸಿಬ್ಬಂದಿಗಳನ್ನೊಳಗೊಂಡಿದ್ದ ಭಾರತೀಯ ವಿಮಾನ ಅಪರಹಣಕ್ಕೀಡಾಗಿತ್ತು. ಈ ಸಂದರ್ಭದಲ್ಲಿ ಮೌಲಾನಾ ಮಸೂದ್ ಅಜರ್ ಸೇರಿದಂತೆ ಮೂವರು ಭಯೋತ್ಪಾದಕರನ್ನು ಅಪಹರಣಕಾರರು ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಇದೇ ಕಾರಣದಿಂದ ಅಪಹರಣ ತಡೆ ಕಾಯ್ದೆಯನ್ನು ಜಾರಿಗೆ ತರಲು ಯುಪಿಎ ಸರಕಾರವು ನಿರ್ಧರಿಸಿತ್ತು. 2005ರಲ್ಲಿ ಅಧಿಕಾರಕ್ಕೆ ಬಂದ ನಂತರ ಈ ಸಂಬಂಧ ತಿದ್ದುಪಡಿಯನ್ನೂ ಮಾಡಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ