ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎನ್ನಾರೈ ಮತದಾನ ಹಕ್ಕಿಗೆ ಹಣವೇ ಅರ್ಹತೆಯಲ್ಲ: ಠಾಕ್ರೆ ಕೆಂಡ (Vote | NRI | PM Manmohan Singh | Bal Thackeray | Non Resident Indian)
Bookmark and Share Feedback Print
 
PTI
ಮುಂದಿನ ಮಹಾ ಚುನಾವಣೆಗಳಿಗೆ ಮುನ್ನ ಎನ್ನಾರೈಗಳಿಗೆ (ಅನಿವಾಸಿ ಭಾರತೀಯರಿಗೆ) ಮತದಾನದ ಹಕ್ಕು ನೀಡುವ ಕುರಿತಾದ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆಯನ್ನು ಕಟುವಾಗಿ ಟೀಕಿಸಿರುವ ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆ, ನಾವು ಇರುವ ಮಣ್ಣನ್ನೇ ತಾಯ್ನಾಡು ಎಂದು ಭಾವಿಸಿ ಅದಕ್ಕೆ ನಿಷ್ಠರಾಗಿರಬೇಕು ಎಂದು ಎನ್ನಾರೈಗಳಿಗೆ ಸಲಹೆ ನೀಡಿದ್ದಾರೆ.

ಎನ್ನಾರೈಗಳ ಬಳಿ ಲೋಡುಗಟ್ಟಲೆ ಹಣ ಇದೆ ಎಂಬ ಕಾರಣಕ್ಕೆ ಅವರಿಗೆ ಮತದಾನದ ಹಕ್ಕು ನೀಡುವುದು ತರವಲ್ಲ ಎಂದು ತಮ್ಮ ಪಕ್ಷದ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಬರೆದಿರುವ ಅವರು, ಭಾರತದಲ್ಲಿರುವ ಬಹುಸಂಖ್ಯೆಯ ಮುಸ್ಲಿಮರು ಪಾಕಿಸ್ತಾನಕ್ಕೆ ನಿಷ್ಠರಾಗಿದ್ದಾರೆ, ಅದರ ಪರಿಣಾಮಗಳನ್ನು ನಾವೀಗ ಎದುರಿಸುತ್ತಿದ್ದೇವೆ ಎಂದೂ ಸೇರಿಸಿದ್ದಾರೆ.

ವಿದೇಶದಲ್ಲಿ ನೆಲೆಸಿರುವ ತಮ್ಮ ಪುತ್ರದಿಂದ ಭಾರತವು ಹಣ ನಿರೀಕ್ಷಿಸುತ್ತಿಲ್ಲ. ಅವರು ಸ್ವಲ್ಪಕಾಲ ಇಲ್ಲಿಗೆ ಬಂದು, ಸ್ಥಳೀಯರಿಗೆ ಮಾರ್ಗದರ್ಶನ ನೀಡಿ, ತಮ್ಮ ಜ್ಞಾನ, ಸಮಯ ಮತ್ತು ಅನುಭವವನ್ನು ಹಂಚಿಕೊಂಡು ಈ ದೇಶದ ಪ್ರಗತಿಗೆ ನೆರವಾಗುವುದನ್ನು ಭಾರತವು ನಿರೀಕ್ಷಿಸುತ್ತದೆ. ಮತದಾನದ ಹಕ್ಕಿಗಿಂತಲೂ ಇದೇ ಅತ್ಯಂತ ಹೆಚ್ಚು ಮಹತ್ವದ್ದು ಎಂದು ಠಾಕ್ರೆ ಹೇಳಿದ್ದಾರೆ.

"ನೀವು (ಎನ್ನಾರೈಗಳು) ಎಲ್ಲಿದ್ದೀರೋ ಅದನ್ನೇ ನಿಮ್ಮ ದೇಶವೆಂದು, ತಾಯ್ನಾಡೆಂದು ಭಾವಿಸಿ. ಎರಡು ಬಂಡೆಗಳ ಮೇಲೆ ಕಾಲಿಡಬೇಡಿ. ಇಲ್ಲವಾದಲ್ಲಿ ನೀವು ಇಬ್ಬದಿಯ ನಿಷ್ಠೆಯವರು ಎಂಬ ಟೀಕೆಗೆ ಸಿಲುಕಬೇಕಾದೀತು" ಎಂದೂ ಎಚ್ಚರಿಸಿರುವ ಠಾಕ್ರೆ, ಮಹಾರಾಷ್ಟ್ರದಲ್ಲಿ ಬಂದು ನೆಲಸಿರುವ ಹೊರನಾಡ ಜನರ ಬಗೆಗೂ ಇದೇ ನೀತಿಯನ್ನು ಅನುಸರಿಸುವರೇ ಎಂದು ಕಾದು ನೋಡಬೇಕಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ