ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಾಳಿ ನಿಲ್ಲಿಸಿ, ಇಲ್ಲದಿದ್ರೆ ಆಸೀಸ್‌ಗೆ ಆಡಲು ಬಿಡಲ್ಲ: ಠಾಕ್ರೆ (Vote | NRI | PM Manmohan Singh | Bal Thackeray | Non Resident)
Bookmark and Share Feedback Print
 
PTI
ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ದಾಳಿ ನಿಲ್ಲುವವರೆಗೆ ಮುಂಬೈ ನೆಲದಲ್ಲಿ ಆಸೀಸ್ ತಂಡಕ್ಕೆ ಆಡಲು ಅವಕಾಶ ನೀಡುವುದಿಲ್ಲ ಎಂದು ಶಿವಸೇನೆಯ ವರಿಷ್ಠ ಬಾಳ ಠಾಕ್ರೆ ಗುಡುಗಿದ್ದಾರೆ.

ಶಿವಸೇನೆ ಪಕ್ಷದ ಮುಖವಾಣಿಯಾದ ಸಾಮ್ನಾದಲ್ಲಿ ಬರೆದಿರುವ ಲೇಖನದಲ್ಲಿ, ಠಾಕ್ರೆ ಆಸೀಸ್ ವಿರುದ್ಧ ಕಿಡಿಕಾರಿದ್ದಾರೆ. ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ನಿರಂತರವಾಗಿ ಜನಾಂಗೀಯ ದಾಳಿ ನಡೆಯುತ್ತಿದ್ದರು ಕೂಡ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಆಸ್ಟ್ರೇಲಿಯಾ ಸರ್ಕಾರ ವಿಫಲವಾಗಿದೆ ಎಂದು ದೂರಿದ್ದಾರೆ.

ಆ ನಿಟ್ಟಿನಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ಜನಾಂಗೀಯ ದಾಳಿ ನಿಲ್ಲುವವರೆಗೆ ತಾವು ಮುಂಬೈಯಲ್ಲಿ ಆಸೀಸ್ ತಂಡಕ್ಕೆ ಆಡಲು ಬಿಡುವುದಿಲ್ಲ ಎಂದು ಲೇಖನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರವಷ್ಟೇ ಮುಂದಿನ ಮಹಾ ಚುನಾವಣೆಗಳಿಗೆ ಎನ್ನಾರೈಗಳಿಗೆ (ಅನಿವಾಸಿ ಭಾರತೀಯರಿಗೆ) ಮತದಾನದ ಹಕ್ಕು ನೀಡುವ ಕುರಿತಾದ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹೇಳಿಕೆಯನ್ನು ಬಾಳ ಠಾಕ್ರೆ ಕಟುವಾಗಿ ಟೀಕಿಸಿದ್ದರು. ಎನ್ನಾರೈಗಳ ಬಳಿ ಲೋಡುಗಟ್ಟಲೆ ಹಣ ಇದೆ ಎಂಬ ಕಾರಣಕ್ಕೆ ಅವರಿಗೆ ಮತದಾನದ ಹಕ್ಕು ನೀಡುವುದು ತರವಲ್ಲ ಎಂದು ಸಾಮ್ನಾದ ಸಂಪಾದಕೀಯದಲ್ಲಿ ಗುಡುಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ