ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಜರಂಗ ದಳ ಸಂಸ್ಥಾಪಕ ಕಟಿಯಾರ್ ರಾಜಕೀಯ ಸನ್ಯಾಸ? (Ayodhya movement | saffron leader | Vinay Katiyar | BJP)
Bookmark and Share Feedback Print
 
ಅಯೋಧ್ಯಾ ಚಳವಳಿಯ ಚಾಂಪಿಯನ್ ಎಂದೇ ಗುರುತಿಸಿಕೊಂಡಿದ್ದ ವಿನಯ್ ಕಟಿಯಾರ್ ಬಿಜೆಪಿಯಲ್ಲೀಗ ಯಾರಿಗೂ ಬೇಡವಾದ ವ್ಯಕ್ತಿ. ತನ್ನನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿಯೇ ಅರಿತುಕೊಂಡಿರುವ ಅವರೀಗ ರಾಜಕೀಯ ಸನ್ಯಾಸ ತೆಗೆದುಕೊಳ್ಳುವ ಬೆದರಿಕೆಯನ್ನೂ ಹಾಕಿದ್ದಾರೆ.

ಕಟಿಯಾರ್ ತೆಗೆದುಕೊಳ್ಳಲು ಬಯಸುತ್ತಿರುವುದು ಕೇವಲ ರಾಜಕೀಯ ಸನ್ಯಾಸವಷ್ಟೇ ಅಲ್ಲ, ಅದು ಸನ್ಯಾಸ ಜೀವನವೂ ಹೌದು. ಮೊದಲಿನಿಂದಲೂ ಧಾರ್ಮಿಕ ಚಿಂತನೆಗಳನ್ನೇ ಉಸಿರಾಡುತ್ತಿದ್ದ ಅವರು ಪ್ರಸಕ್ತ ಅಯೋಧ್ಯೆಯಲ್ಲಿನ ಸರಯೂ ನದಿ ತೀರದಲ್ಲಿ 'ಕಲ್ಪವಾಸ್' ಎಂಬ ತಿಂಗಳುಗಳಷ್ಟು ಅವಧಿಯವರೆಗೆ ನಡೆಸುವ ವ್ರತದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಕಾನ್ಪುರದಲ್ಲಿ ಜನಿಸಿದ್ದ ಕಟಿಯಾರ್ ಹಿಂದೂ ಸಂಘಟನೆ ಬಜರಂಗ ದಳದ ಸ್ಥಾಪಕರೂ ಹೌದು. ಬಳಿಕ ಕೇಸರಿ ಪಾಳಯದ ಮುಂಚೂಣಿಯಲ್ಲೇ ಗುರುತಿಸಿಕೊಂಡು ಬಂದ ಅವರು 1991ರ ಹೊತ್ತಿಗೆ ಬಿಜೆಪಿಯಲ್ಲಿ ಎದ್ದು ಕಾಣುತ್ತಿದ್ದ ಮುಖ.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಯನ್ನು ಹೊಂದಿದ್ದಾರಾದರೂ ಯಾರೂ ಅವರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ತನಗೆ ಅಲ್ಲೇನೂ ಹೆಚ್ಚಿನ ಜವಾಬ್ದಾರಿಗಳಿಲ್ಲ ಎಂದು ಪರೋಕ್ಷವಾಗಿ ಜವಾಬ್ದಾರಿ ಬೇಕು ಎಂಬ ದನಿಯನ್ನು ಕಟಿಯಾರ್ ಹೊರಡಿಸಿದ್ದಾರೆ.

ಅಲ್ಲದೆ ಈಗಿನ ಹೊಲಸು ರಾಜಕೀಯದಿಂದ ತನಗೆ ಮುಕ್ತಿ ಬೇಕೆಂದು ಹೇಳಿದ್ದಾರೆ. ಬಿಜೆಪಿಯೊಳಗಿನ ಬೆಳವಣಿಗೆಗಳು ತಂದಿರುವ ಅಸಮಾಧಾನವನ್ನೂ ಅವರು ಹೊರಗೆಡವಿದ್ದಾರೆ.

ಅಯೋಧ್ಯಾ ಚಳವಳಿ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದ ಕಲ್ಯಾಣ್ ಸಿಂಗ್, ಉಮಾ ಭಾರತಿ ನಂತರ ಅದೇ ಸಾಲಿಗೆ ಕಟಿಯಾರ್ ಕೂಡ ಸೇರುತ್ತಿರುವುದು ಬಿಜೆಪಿ ಹಿಂದುತ್ವದಿಂದ ದೂರ ಸರಿಯುತ್ತಿರುವುದಕ್ಕೆ ಮತ್ತೊಂದು ಪುರಾವೆ ಎಂದು ಪಕ್ಷದೊಳಗಿನ ಮೂಲಗಳು ಅಭಿಪ್ರಾಯಪಟ್ಟಿವೆ.

ತಾವು ಸನ್ಯಾಸದತ್ತ ತೆರಳುವಿರೆಂದರೆ ರಾಜ್ಯಸಭೆ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದಲೂ ಹಿಂದಕ್ಕೆ ಸರಿಯುತ್ತೀರಾ ಎಂಬ ಪ್ರಶ್ನೆಗವರು ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದ್ದು, ನಾನು ಕೆಟ್ಟ ರಾಜಕೀಯದಿಂದ ಬಿಡುಗಡೆ ಪಡೆಯಲು ಬಯಸುತ್ತಿದ್ದೇನೆ, ನನ್ನ ಕಾರ್ಯಗಳನ್ನಲ್ಲ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ