ಹಿಜ್ಬುಲ್ ಮುಜಾಹಿದಿನ್ ಸಂಘಟನೆಗೆ ಸೇರಿದ ಇಬ್ಬರು ಸ್ವಯಂಘೋಷಿತ ಕಮಾಂಡರ್‌ಗಳು ಹಾಗೂ ಒಬ್ಬ ಸೈನಿಕ ಎನ್‌ಕೌಂಟರ್‌ನಲ್ಲಿ ಮೃತರಾಗಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮಿರದ ಕುಲ್ಗಾಂ ಜಿಲ್ಲೆಯ ಖಾಝಾನ್‌ಬಾಲ್ ಪ್ರದೇಶದಲ್ಲಿ ಇಂದು ಬೆಳ್ಳಿಗ್ಗೆ ಭಧ್ರತಾ ಪಡೆಗಳ ಹಾಗೂ ಉಗ್ರರ ನಡುವೆ ನಡೆದ ಘರ್ಷಣೆಯಲ್ಲಿ ವಿಶೇಷ ಕಾರ್ಯಾಚರಣೆ ತಂಡದ ಇಬ್ಬರು ಪೊಲೀಸರು ಕೂಡಾ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕುಲ್ಗಾಂನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ರಾಮ್ ಮಾತನಾಡಿ, 62ನೇ ರಾಷ್ಟ್ರೀಯ ರೈಫಲ್ಸ್ ಪಡೆಗಳ ಸಹಯೋಗದೊಂದಿಗೆ ಪೊಲೀಸ್ ತಂಡ, ಉಗ್ರರು ಅವಿತಿರುವ ಗ್ರಾಮವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.
ಜಂಟಿ ಕಾರ್ಯಾಚರಣೆ ನಡೆಸುತ್ತಿರುವಾಗ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ರಾಷ್ಟ್ರೀಯ ರೈಫಲ್ಸ್ ಪಡೆಗೆ ಸೇರಿದ ಸುರೀಂದ್ರ್ ಸಿಂಗ್ ಮತ್ತು ವಿಶೇಷ ಕಾರ್ಯಾಚರಣೆ ಪಡೆಯ ಅಧಿಕಾರಿ ಝಹೂರ್ ಅಹ್ಮದ್ ಗಾಯಗೊಂಡಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೇನಾಪಡೆಗಳು ನಡೆಸಿದ ಮರು ದಾಳಿಯಲ್ಲಿ ನಿನ್ನೆ ರಾತ್ರಿ ಒಬ್ಬ ಉಗ್ರ ಹತನಾಗಿದ್ದು,ಮತ್ತಿಬ್ಬರು ಉಗ್ರರಾದ ತಾಹೀರ್ ಮತ್ತು ಆದಿಲ್ ಎನ್ನುವವರನ್ನು ಇಂದು ಬೆಳಿಗ್ಗೆ ಹತ್ಯೆ ಮಾಡಲಾಯಿತು
ಉಗ್ರರಿಂದ ಎರಡು ಎಕೆ47 ರೈಫಲ್‌ಗಳು, ಹಲವಾರು ಗ್ರೆನೇಡ್‌ಗಳು ಹಲವು ಸುತ್ತಿನ ಗುಂಡುಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಜಿಲ್ಲಾ ಎಸ್‌ಪಿ.ರಾಮ್ ತಿಳಿಸಿದ್ದಾರೆ.