ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಪ್ಪಲಿದೆ ಮಣಭಾರ; ಶಾಲಾ ಬ್ಯಾಗುಗಳ ತೂಕಕ್ಕೊಂದು ಮಿತಿ (Kendriya Vidyalaya | weight limits | schoolbags | students)
Bookmark and Share Feedback Print
 
ಪುಟ್ಟ ಮಕ್ಕಳು ತಮಗಿಂತ ಎತ್ತರ ಮತ್ತು ಭಾರವಿರುವ ಬ್ಯಾಗುಗಳನ್ನು ಹೊತ್ತು ಶಾಲೆಗೆ ಹೋಗುವಾಗ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಹಂಗಿಸದವರು ಯಾರಿದ್ದಾರೆ? ಇದನ್ನು ಮನಗಂಡಿರುವ ಕೇಂದ್ರೀಯ ವಿದ್ಯಾಲಯವು ತನ್ನ ವಿದ್ಯಾರ್ಥಿಗಳ ತರಗತಿಗಳಿಗನುಗುಣವಾಗಿ ಬ್ಯಾಗುಗಳ ತೂಕ ಇಂತಿಷ್ಟೇ ಇರಬೇಕೆಂಬ ನಿಯಮಗಳನ್ನು ರೂಪಿಸಿದೆ.

ಅದರ ಪ್ರಕಾರ ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳ ಬ್ಯಾಗುಗಳು ಎರಡು ಕೇಜಿ ತೂಕವನ್ನು ಮೀರಬಾರದು. ಮೂರು ಮತ್ತು ನಾಲ್ಕನೇ ತರಗತಿಯ ಮಕ್ಕಳ ಬ್ಯಾಗಿನ ತೂಕ ಮೂರೇ ಕೇಜಿ. ಐದರಿಂದ ಎಂಟನೇ ತರಗತಿಯವರೆಗಿನ ವಿದ್ಯಾರ್ಥಿಗಳ ಬ್ಯಾಗುಗಳು ನಾಲ್ಕು ಕೇಜಿವರೆಗೆ ತೂಗಲು ಅವಕಾಶವಿದೆ ಎಂದು ಕೇಂದ್ರೀಯ ವಿದ್ಯಾಲಯ ಸಂಘಟನೆ (ಕೆವಿಎಸ್) ತಿಳಿಸಿದೆ.
WD


ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಅಂದರೆ ಒಂಬತ್ತರಿಂದ 12ನೇ ತರಗತಿಯವರೆಗೆ ಆರು ಕೇಜಿ ಬ್ಯಾಗುಗಳನ್ನು ಹೊರಿಸಬಹುದಾಗಿದೆ ಎಂದು ದೇಶದಾದ್ಯಂತ ಮಿಲಿಯನ್‌ಗೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ 981 ಕೇಂದ್ರೀಯ ವಿದ್ಯಾಲಯಗಳಿಗೆ ಕೆವಿಎಸ್ ಪ್ರಧಾನ ಕಚೇರಿ ಸೂಚನೆ ನೀಡಿದೆ.

ಮನೋವಿಜ್ಞಾನದ ಸಲಹೆಯಂತೆ ಕೇಂದ್ರೀಯ ವಿದ್ಯಾಲಯವು ಈ ತೀರ್ಮಾನಕ್ಕೆ ಬಂದಿದೆ. ಪುಟ್ಟ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಷ್ಟು ತೂಕವನ್ನು ಅವರ ಮೇಲೆ ಹೇರುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ನೂತನ ನಿಯಮಗಳನ್ನು ಹಂತ ಹಂತವಾಗಿ ಜಾರಿಗೆ ತರುವಂತೆ ನಮ್ಮ ಪ್ರಿನ್ಸಿಪಾಲರುಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರೀಯ ವಿದ್ಯಾಲಯ ಹೇಳಿದೆ.

ದೇಶದಲ್ಲೇ ಶಾಲಾ ಬ್ಯಾಗುಗಳ ಮೇಲಿನ ಭಾರವನ್ನು ಕಡಿಮೆ ಮಾಡಿದ ಮೊದಲ ಶಾಲೆ ನಮ್ಮದು. ಇದು ಯಶಸ್ವಿಯಾಗುತ್ತದೆ ಎಂಬ ಭರವಸೆ ನಮ್ಮದು. ಅಲ್ಲದೆ ಇತರ ಶಾಲೆಗಳು ಕೂಡ ಇದನ್ನೇ ಅನುಸರಿಸುವ ನಿರೀಕ್ಷೆಗಳಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ