ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿ ನ್ಯೂನತೆಗಳಿಗೆ ಎದುರಾಳಿಗಳು ಕಾರಣರಲ್ಲ: ಅಡ್ವಾಣಿ (BJP | Lok Sabha poll | L K Advani | RSS)
Bookmark and Share Feedback Print
 
ಮಹಾಚುನಾವಣೆ ಬಳಿಕ ಬಿಜೆಪಿಯಲ್ಲಿ ಆಂತರಿಕ ಸಮರ ನಡೆಯುತ್ತಿರುವುದನ್ನು ಯಾವುದೇ ಮುಚ್ಚುಮರೆಯಿಲ್ಲದೆ ಒಪ್ಪಿಕೊಂಡಿರುವ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ, ಪಕ್ಷದಲ್ಲಿನ ನ್ಯೂನತೆಗಳಿಗೆ ರಾಜಕೀಯ ಎದುರಾಳಿಗಳು ಕಾರಣವಲ್ಲ, ಬದಲಿಗೆ ಪಕ್ಷದೊಳಗಿನ ಸಮಸ್ಯೆಗಳೇ ಕಾರಣ ಎಂದು ಹೇಳಿದ್ದಾರೆ.

ಪಕ್ಷದಲ್ಲಿ ಕೆಲವು ನ್ಯೂನತೆಗಳಿವೆ. ಇದಕ್ಕೆ ನಮ್ಮ ರಾಜಕೀಯ ವಿರೋಧಿಗಳು ಕಾರಣರಲ್ಲ. ಪಕ್ಷದೊಳಗಿನ ಸಮಸ್ಯೆಗಳೇ ಕಾರಣ ಎಂದು ಸಂಸದೀಯ ಪಕ್ಷದ ಅಧ್ಯಕ್ಷರಾಗಿರುವ ಅಡ್ವಾಣಿ ಹೇಳಿದ್ದಾರೆ.
PTI


ಕೆಲವು ರಾಜಕೀಯ ಎದುರಾಳಿಗಳನ್ನು ಹೊರತುಪಡಿಸಿ ಪ್ರತಿಯೊಬ್ಬರೂ ಪಕ್ಷದ ಕುರಿತು ಆತಂಕಿತರಾಗಿದ್ದಾರೆ. ಅದರಲ್ಲೂ ಕೆಲವರಂತೂ ನಮ್ಮ ಬಳಿ ಬಂದು ಏನಾದರೂ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆಗಳನ್ನೂ ನೀಡಿದ್ದಾರೆ. ರಾಜಕೀಯ ಎದುರಾಳಿಗಳೂ ಇಂತಹ ಸಲಹೆಗಳನ್ನು ನೀಡಿದ್ದಿದೆ ಎಂದರು.

ಬಿಜೆಪಿಯು ಲೋಕಸಭಾ ಚುನಾವಣೆಯಲ್ಲಿ ಕಳಪೆ ನಿರ್ವಹಣೆ ನೀಡಿದ ನಂತರ ಪಕ್ಷದೊಳಗಿನ ಮತ್ತು ಆರೆಸ್ಸೆಸ್ ಒತ್ತಡದಿಂದಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ಸ್ಥಾನವನ್ನು ತ್ಯಜಿಸಿದ್ದ ಅಡ್ವಾಣಿಯವರು ಪಕ್ಷದ ಸ್ಥಿತಿಯನ್ನು ವಿಮರ್ಶಿಸುತ್ತಿದ್ದಾರೆ.

ತನ್ನ ಪುತ್ರಿ ಪ್ರತಿಭಾ ನಿರ್ಮಿಸುತ್ತಿರುವ ಸಾಕ್ಷ್ಯ ಚಿತ್ರವೊಂದನ್ನು ಬಿಡುಗಡೆ ಮಾಡುವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಅವರು ಮಕರ ಸಂಕ್ರಾಂತಿ ಬಿಜೆಪಿಗೂ ಹೊಸ ಸಂಕ್ರಮಣವನ್ನು ಕರುಣಿಸಲಿದೆ ಎಂಬ ಆಶಾವಾದವನ್ನೂ ವ್ಯಕ್ತಪಡಿಸಿದ್ದಾರೆ.

ರಥ ಯಾತ್ರೆಗಳಿಂದ ಭಾರೀ ಜನಪ್ರಿಯರಾಗಿದ್ದ ಹಿರಿಯ ನಾಯಕ ತನ್ನ ರಾಜಕೀಯ ಪಯಣವನ್ನು 14ರ ಹರೆಯದಲ್ಲಿ ಆರೆಸ್ಸೆಸ್ ಸೇರುವ ಮೂಲಕ ಆರಂಭಿಸಿದ್ದೆ ಎಂದು ಬಹಿರಂಗಪಡಿಸಿದರು. ಅಲ್ಲದೆ ತಾನು ದೇಶಕ್ಕೆ ಸ್ವಾತಂತ್ರ್ಯ ಬಂದಂದಿನಿಂದ ಇಂದಿನವರೆಗೂ ಭಾರತವನ್ನು ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಲು ಅವಿರತ ಶ್ರಮವಹಿಸುತ್ತಿದ್ದು, ಕೊನೆಯ ಉಸಿರಿನವರೆಗೂ ಇದು ಮುಂದುವರಿಯುತ್ತದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ