ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 26/11 ದಾಳಿ ಉಗ್ರ ಕಸಬ್‌ಗೆ ಗೊತ್ತೇ ಇಲ್ವಂತೆ! (Lashkar-e-Taiba | Ajmal Amir alias Kasab | Mumbai | 26/11)
Bookmark and Share Feedback Print
 
PTI
ಮುಂಬೈ ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ಜೀವಂತವಾಗಿ ಸೆರೆ ಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್ ನ್ಯಾಯಾಲಯದಲ್ಲಿ ಸುಳ್ಳು ಹೇಳುವ ತನ್ನ ನಾಟಕವನ್ನು ಮುಂದುವರಿಸಿದ್ದು, ತಾಜ್, ಒಬೆರಾಯ್, ನಾರಿಮನ್ ಹೌಸ್ ಹಾಗೂ ಲಿಯೋಪಾಡ್ ಕೆಪೆ ಮೇಲೆ ದಾಳಿ ನಡೆಸಲಾಗುತ್ತದೆ ಎಂಬ ವಿಷಯ ಆತನಿಗೆ ಗೊತ್ತೆ ಇಲ್ಲ ಎಂದು ತಿಳಿಸಿದ್ದಾನೆ!

ವಿಶೇಷ ಭಯೋತ್ಪಾದನಾ ನಿಗ್ರಹ ನ್ಯಾಯಾಲಯಕ್ಕೆ ಹಾಜರಾಗಿದ್ದ ಕಸಬ್ ಈ ಹೇಳಿಕೆ ನೀಡಿದ್ದಾನೆ. ಈ ದಾಳಿಗಳ ವೇಳೆ ಸಾರ್ವಜನಿಕರ ಮೇಲೆ ಗುಂಡು ಹಾರಿಸಿದ ಮತ್ತು ಬಾಂಬ್ ಸ್ಫೋಟಿಸಿದ ಉಗ್ರರು ಯಾರೆಂಬುದೂ ತನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ.ಅಲ್ಲದೇ, ಮುಂಬೈ ದಾಳಿಯ ವೇಳೆ ಹಲವಾರು ವಿದೇಶಿ ವ್ಯಕ್ತಿಗಳು ಸಾವನ್ನಪ್ಪಿರುವ ವಿಚಾರವೂ ಆತನಿಗೆ ಗೊತ್ತಿಲ್ಲವಂತೆ. ಸಿಎಸ್‌ಟಿಯಲ್ಲಿ ತಮ್ಮ ಮೇಲೆ ದಾಳಿ ನಡೆಸಲಾಗಿದೆ ಎಂದು ನಾಗರಿಕರು ಕಸಬ್ ವಿರುದ್ಧ ದೂರು ಕೊಟ್ಟಿರುವುದು ಸಹ ತನಗೆ ತಿಳಿದಿಲ್ಲ ಎಂದು ಹೇಳಿದ್ದಾನೆ.

ಮುಂಬೈ ದಾಳಿ ಕುರಿತಂತೆ ಈ ಮೊದಲು ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದ ಕಸಬ್ ಇದೀಗ ಏಕಾಏಕಿ ನ್ಯಾಯಾಲಯದ ವಿಚಾರಣೆ ವೇಳೆ,ಉಗ್ರರ ದಾಳಿ ವಿಚಾರವಾಗಲಿ ಏನೊಂದು ತನಗೆ ಗೊತ್ತಿಲ್ಲ. ಪೊಲೀಸರು ಬಲವಂತದಿಂದ ತನ್ನ ಹೇಳಿಕೆಯನ್ನು ಪಡೆದಿದ್ದರು ಎಂಬ ಧಾಟಿಯಲ್ಲಿ ಮಾತನಾಡತೊಡಗಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ