ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನ್ನಿಂದಾಗಿ ಅಣ್ಣ ಸತ್ತ; ಪಾಪ ಪ್ರಜ್ಞೆಯಿಂದ ತಂಗಿ ಆತ್ಮಹತ್ಯೆ (Guilt feeling | college girl | Sachin | Poornima Kshirsagar)
Bookmark and Share Feedback Print
 
ಯಾವುದೋ ಕಾರಣಕ್ಕಾಗಿ ನಡೆದಿದ್ದ ಕೋಳಿಜಗಳದ ಸಂದರ್ಭದಲ್ಲಿ ಒಡಹುಟ್ಟಿದ ಸಹೋದರನ ಸಾವಿಗೆ ಬಯಸಿದ್ದ ಸಹೋದರಿಯ ಕ್ಷಣಿಕ ಆಸೆ ನಿಜವಾಗಿ ಬಿಟ್ಟಾಗ ಹೇಗಾಗಬೇಡ. ಇದೇ ಅಪರಾಧಿ ಪ್ರಜ್ಞೆಯಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಜೀವ ಕಳೆದುಕೊಂಡ ಪ್ರಸಂಗವೊಂದು ವರದಿಯಾಗಿದೆ.

ವರ್ಷದ ಹಿಂದೆ ತನ್ನ ಸಹೋದರ ಸಚಿನ್ ಜತೆ 17ರ ಹರೆಯದ ಪೂರ್ಣಿಮಾ ಕ್ಷೀರಸಾಗರ್ ಎಂಬ ಕಾಲೇಜು ಹುಡುಗಿ ಎಲ್ಲಾ ಒಡಹುಟ್ಟಿದವರ ನಡೆಯುವ ಸಣ್ಣಪುಟ್ಟ ಜಗಳದಂತೆಯೇ ಮುನಿಸಿಕೊಂಡಿದ್ದಳು. ಈ ಸಂದರ್ಭದಲ್ಲಿ ಸಚಿನ್ ಸಾಯಬೇಕು ಎಂದು ಕೂಡ ಮನಸ್ಸಿನಲ್ಲಿ ಶಪಿಸಿದ್ದಳಂತೆ.

ದುರದೃಷ್ಟವಶಾತ್ ಸ್ವಲ್ಪವೇ ದಿನದಲ್ಲಿ ಸಚಿನ್ ತನ್ನ ಗೆಳೆಯನೊಂದಿಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಪ್ರಾಣ ತೆತ್ತಿದ್ದ. ಇದರಿಂದ ಆಘಾತಕ್ಕೊಳಗಾದ ಪೂರ್ಣಿಮಾ, ತನ್ನ ಸ್ವಂತಃ ಸಹೋದರನ ಸಾವಿಗೆ ಬಯಸಿದ್ದ ಪಾಪಿ ನಾನು; ನನ್ನ ಕಾರಣದಿಂದಲೇ ಅಣ್ಣ ಇಹಲೋಕ ತ್ಯಜಿಸಬೇಕಾಯಿತು ಎಂದು ಆಕೆ ಮನೆಯಲ್ಲಿ ಆಗಾಗ ತನಗೆ ಕಾಡುತ್ತಿದ್ದ ನೋವನ್ನು ತೋಡಿಕೊಳ್ಳುತ್ತಿದ್ದಳು.

ಕೊನೆಗೂ ಆ ನೋವಿಗೆ ಅಂತ್ಯ ಹಾಡಲು ನಿರ್ಧರಿಸಿದ ರೀತಿ ಮಾತ್ರ ಹೇಯ. ಪುಣೆಯ ಪಾಘೋಲಿ ಎಂಬಲ್ಲಿನ ಕಾಲೇಜೊಂದರಲ್ಲಿ ವಿಜ್ಞಾನ ವಿಭಾಗದ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಪೂರ್ಣಿಮಾ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಜೊತೆಗೆ ತನ್ನ ಮನಸ್ಸಿನಲ್ಲಿ ಕೊರೆಯುತ್ತಿದ್ದ ಪಾಪ ಪ್ರಜ್ಞೆಯನ್ನು ತನ್ನ ಕೊನೆಯ ಪತ್ರದಲ್ಲಿ ಬರೆದಿಟ್ಟಿದ್ದಾಳೆ. ಸಹೋದರನ ಸಾವಿನ ಕುರಿತು ನನ್ನಲ್ಲಿರುವ ಅಪರಾಧಿ ಪ್ರಜ್ಞೆಯನ್ನು ತೊಡೆದು ಹಾಕಲು ಸಾಧ್ಯವಾಗದ ಕಾರಣ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂಬುವುದು ಅದರ ಸಾರಾಂಶ.

ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಪೂರ್ಣಿಮಾಳ ತಂದೆ, ಸಂಜೆ ಮನೆಗೆ ಬಂದು ಮಗಳನ್ನು ಕರೆದಾಗ ಪ್ರತಿಕ್ರಿಯೆ ಬಂದಿರಲಿಲ್ಲ. ಬಾಗಿಲು ಬಡಿದರೂ ಉತ್ತರ ಬರದಿದ್ದಾಗ ಕಿಟಕಿಯ ಮೂಲಕ ಇಣುಕಿ ನೋಡಿದ್ದರು.

ಇದೀಗ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮ್ಮದಲ್ಲದ ತಪ್ಪಿಗೆ ಬೆಳೆದು ನಿಂತ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ಹೆತ್ತವರ ನೋವನ್ನು ಕೇಳುವವರು ಯಾರು?
ಸಂಬಂಧಿತ ಮಾಹಿತಿ ಹುಡುಕಿ