ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತದ ಭ್ರಷ್ಟಾಚಾರ ಮೊತ್ತ 2.5 ಲಕ್ಷ ಕೋಟಿ ರೂಪಾಯಿ! (corruption cost Indians | Mumbai | C K Prahalad | election campaigns)
Bookmark and Share Feedback Print
 
ಭಾರತದಲ್ಲಿ ನಡೆದಿರುವ ಭ್ರಷ್ಟಾಚಾರದ ಒಟ್ಟು ಮೊತ್ತ 250,000 ಕೋಟಿ ರೂಪಾಯಿಗಳನ್ನೂ ಮೀರಬಹುದು ಮತ್ತು ಇದರಲ್ಲಿ ನಮ್ಮ ರಾಜಕಾರಣಿಗಳ ಮತ್ತು ಚುನಾವಣಾ ನಿಧಿಗಳ ಪಾತ್ರ ಮಹತ್ವದ್ದು ಎಂದು ಹೇಳುವ ಮೂಲಕ ಮ್ಯಾನೇಜ್‌ಮೆಂಟ್ ಗುರು ಸಿ.ಕೆ. ಪ್ರಹ್ಲಾದ್ ಹುಬ್ಬೇರಿಸುವಂತೆ ಮಾಡಿದ್ದಾರೆ.

ಖ್ಯಾತ ಆರ್ಥಿಕ ತಜ್ಞ ದಿವಂಗತ ನಾನಾಭಾಯ್ ಆರ್ದೇಶಿರ್ ಪಾಲ್ಖಿವಾಲಾರವರ ಏಳನೇ ಸ್ಮರಣಾರ್ಥ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಪ್ರಹ್ಲಾದ್, ಚುನಾವಣಾ ಪ್ರಚಾರಗಳ ಸಂದರ್ಭಗಳಲ್ಲಿ ರಾಜಕಾರಣಿಗಳು ಹಣದ ಹೊಳೆ ಹರಿಸುತ್ತಾರೆ ಮತ್ತು ಗೆದ್ದ ನಂತರ ಅದನ್ನು ವಾಪಸ್ ಪಡೆಯಲು ಯತ್ನಿಸುತ್ತಾರೆ; ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಲು ಇದೇ ಮೂಲ ಕಾರಣ ಎಂದು ಅಭಿಪ್ರಾಯಪಟ್ಟರು.

2009ರ ಲೋಕಸಭಾ ಚುನಾವಣೆಗಳಿಗೆ ಭಾರತವು ಸುಮಾರು 10,000 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ಇಲ್ಲಿ ಚುನಾವಣಾ ಆಯೋಗವು 1,300 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದರೆ, 700 ಕೋಟಿ ರೂಪಾಯಿಗಳನ್ನು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ವೆಚ್ಚ ಮಾಡಿವೆ. ಉಳಿದ 8,000 ಕೋಟಿ ರೂಪಾಯಿಗಳು ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳಿಂದ ವೆಚ್ಚವಾಗಿವೆ.

ರಾಜ್ಯಗಳ ಚುನಾವಣೆಗಳ ವೆಚ್ಚವನ್ನೂ ಇದಕ್ಕೆ ಸೇರಿಸಿದರೆ ಭಾರತದ ಚುನಾವಣಾ ವೆಚ್ಚವೇ 25,000 ಕೋಟಿ ರೂಪಾಯಿಗಳನ್ನು ದಾಟುತ್ತದೆ ಎಂದು ಪ್ರಹ್ಲಾದ್ ಈ ಸಂದರ್ಭದಲ್ಲಿ ಅಂಕಿ-ಅಂಶ ಸಮೇತವಾಗಿ ತಿಳಿಸಿದರು.

ಕೇವಲ ಒಂದು ಬಾರಿಯ ಚುನಾವಣೆಯಲ್ಲಿ ದೇಶದಲ್ಲಿ ನಡೆಯುವ ಭ್ರಷ್ಟಾಚಾರ 25,000 ಕೋಟಿಗಳನ್ನು ಮೀರುತ್ತದೆ ಎನ್ನುವಾಗ, ಇದುವರೆಗೆ ನಡೆದಿರುವ ನಡೆದಿರುವ ಭ್ರಷ್ಟಾಚಾರದ ಮೊತ್ತ 250,000 ಕೋಟಿ ರೂಪಾಯಿಗಳನ್ನೂ ಮೀರಬಹುದು ಎಂದು ಅವರು ಅಂದಾಜಿಸಿದ್ದಾರೆ.

ಖಾಸಗಿ ಕಂಪನಿಗಳು ಅಥವಾ ವ್ಯಕ್ತಿಗಳು ರಾಜಕೀಯ ಪಕ್ಷಗಳಿಗೆ ನಿಧಿಗಳನ್ನು ನೀಡುವ ಮತ್ತೊಂದು ಅರ್ಥವೆಂದರೆ ಅದನ್ನು ಸಮರ್ಥವಾಗಿ ವಾಪಸ್ ಪಡೆಯುತ್ತೇವೆ ಎಂಬ ಭರವಸೆ. ಇದು ಒಂದು ರೀತಿಯಲ್ಲಿ ಅಪಾಯಕಾರಿ ರೀತಿಯಲ್ಲಿ ಚುನಾವಣೆಗಳಲ್ಲಿ ಹಣ ಹೂಡಿಕೆ ಮಾಡುವುದು. ಹೂಡಿಕೆದಾರರು ಕನಿಷ್ಠ ತಾವು ಹಾಕಿದ ಮೊತ್ತದ 10ರಷ್ಟು ಪಾಲನ್ನು ಪಡೆಯದೆ ಬಿಡುವುದಿಲ್ಲ ಎಂದು ಅವರು ವಿವರಿಸುವ ಮೂಲಕ ಭ್ರಷ್ಟಾಚಾರ ಎಲ್ಲಿಂದ, ಹೇಗೆ ಹುಟ್ಟುತ್ತದೆ ಎಂಬುದನ್ನು ವಿವರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ