ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಿನಕರನ್‌ ಬಗ್ಗೆ ಆರೋಪಗಳು ಈಗ್ಯಾಕೆ?: ಜಸ್ಟೀಸ್ ಬಾಲಕೃಷ್ಣನ್ (Supreme Court | Chief Justice | K G Balakrishnan | P D Dinakaran)
Bookmark and Share Feedback Print
 
ಭ್ರಷ್ಟಾಚಾರ ಆರೋಪದಿಂದಾಗಿ ಮಹಾಭಿಯೋಗ ಪ್ರಕ್ರಿಯೆ ಭೀತಿಯಲ್ಲಿರುವ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಅವರನ್ನು ಸಮರ್ಥಿಸಿಕೊಂಡಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್, ಭಡ್ತಿ ಪ್ರಸ್ತಾಪದ ಮೊದಲು ಆರೋಪಗಳು ಎಲ್ಲಿ ಹೋಗಿದ್ದವು ಎಂದು ಪ್ರಶ್ನಿಸಿದ್ದಾರೆ.

ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಭಡ್ತಿ ನೀಡುವ ಪ್ರಸ್ತಾಪ ಮಾಡಿದ ಮೇಲೆ ದಿನಕರನ್ ಮೇಲೆ ಎಲ್ಲಾ ಆರೋಪಗಳನ್ನು ಮಾಡಲಾಗಿದೆ ಎಂದಿರುವ ಬಾಲಕೃಷ್ಣನ್, ಕರ್ನಾಟಕ ನ್ಯಾಯಮೂರ್ತಿಗಳ ವಿರುದ್ಧದ ಮಹಾಭಿಯೋಗ ಕ್ರಮದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
Balakrishnan
PTI


ಅವರನ್ನು ಉನ್ನತ ಪದವಿಗೇರಿಸುವ ಸಲಹೆಗಳು ಬಂದಾಗ ಎಲ್ಲಾ ಆರೋಪಗಳನ್ನು ಮಾಡಲಾಗಿದೆ ಎಂದು ಸಿಎನ್ಎನ್-ಐಬಿಎನ್ ಸಂದರ್ಶನದಲ್ಲಿ ದೇಶದ ಉನ್ನತ ನ್ಯಾಯಮೂರ್ತಿಗಳು ಹೇಳಿದ್ದಾರೆ.

ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿರುವ ದಿನಕರನ್ ವಿರುದ್ಧ ಸಂಸತ್ತಿನಲ್ಲಿ ಮಹಾಭಿಯೋಗ ಕ್ರಮಕ್ಕೆ ಮುಂದಾಗಿರುವುದು ನ್ಯಾಯಾಧೀಶರನ್ನು ಅವಮಾನ ಮಾಡುವ ಉದ್ದೇಶದಿಂದ ಎಂದು ನೀವು ಭಾವಿಸುತ್ತೀರಾ ಎಂದು ಬಾಲಕೃಷ್ಣನ್ ಅವರಿಗೆ ಪ್ರಶ್ನಿಸಲಾಯಿತು.

ಆದರೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ದಿನಕರನ್ ಮಹಾಭಿಯೋಗ ಪ್ರಕ್ರಿಯೆಗಳು ನಡೆಯುತ್ತಿವೆ. ಹಾಗಾಗಿ ನಾನು ಪ್ರಾಮಾಣಿಕತೆ ಅಥವಾ ಯಾವುದರ ಬಗ್ಗೆಯೂ ಏನೂ ಹೇಳಲಾರೆ, ಅವರನ್ನು ಸ್ವತಃ ಅವರೇ ರಕ್ಷಿಸಿಕೊಳ್ಳಬೇಕಿದೆ ಎಂದರು.

ಆದರೆ ದಿನಕರನ್ ಮೇಲೆ ಈ ಹಿಂದೆ ಯಾಕೆ ಯಾವುದೇ ಆರೋಪಗಳನ್ನು ಮಾಡಲಾಗಿಲ್ಲ ಎಂದು ಬಾಲಕೃಷ್ಣನ್ ಇದೇ ಸಂದರ್ಭದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ದಿನಕರನ್ ಮದ್ರಾಸ್ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿದ್ದಾಗ ಅವರ ಮೇಲೆ ಒಂದೇ ಒಂದು ಆರೋಪವನ್ನು ಮಾಡಲಾಗಿರಲಿಲ್ಲ. ಅವರು 2008ರ ಆಗಸ್ಟ್ ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದಾಗ ಯಾವುದೇ ಆರೋಪಗಳು ಕೇಳಿ ಬರಲಿಲ್ಲ. ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಿಸುವ ಪ್ರಸ್ತಾಪದವರೆಗೂ ಅವರ ಮೇಲೆ ಯಾರು ಕೂಡ ಆರೋಪಗಳನ್ನು ಮಾಡಿರಲಿಲ್ಲ. ಯಾವುದೇ ಬಾರ್ ಸದಸ್ಯರು ಕೂಡ ತಮ್ಮ ಆಕ್ಷೇಪ ಅಥವಾ ಆರೋಪಗಳನ್ನು ಮಾಡಿಲ್ಲ. ಆದರೆ ಭಡ್ತಿ ಪ್ರಸ್ತಾಪ ಮಾಡಿದ ಕೂಡಲೇ ಆರೋಪಗಳು ಮುತ್ತಿಕೊಂಡವು ಎಂದರು.

ಮಿತಿಗಿಂತ ಹೆಚ್ಚಿನ ಅಕ್ರಮ ಆಸ್ತಿ-ಪಾಸ್ತಿ ಹೊಂದಿರುವ ಆರೋಪ ಹೊತ್ತಿರುವ ದಿನಕರನ್ ಅವರನ್ನು ಪದಚ್ಯುತಗೊಳಿಸಲು ರಾಜ್ಯಸಭೆಯ ವಿರೋಧ ಪಕ್ಷದ ಸದಸ್ಯರು ತಮ್ಮ ಮನವಿಯನ್ನು ಸಭಾಧ್ಯಕ್ಷ ಹಮೀದ್ ಅನ್ಸಾರಿ ಅವರಿಗೆ ಸಲ್ಲಿಸಿದ್ದು, ಈ ಸಂಬಂಧ ತನಿಖೆಗೆ ಸಮಿತಿಯೊಂದನ್ನು ರಚಿಸಲಾಗುತ್ತಿದೆ.

ಭಡ್ತಿಯನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದ ಬಳಿಕ ದಿನಕರನ್ ಇದೀಗ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲೂ ಪ್ರಕರಣಗಳ ವಿಚಾರಣೆ ನಡೆಸುತ್ತಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ